ಮೈಸೂರು

ನಾಳೆ ಕಲಾವಿದರಿಂದ ರಕ್ತದಾನ ಶಿಬಿರ

ಮೈಸೂರು, ಜ.3 : ಚಲನಚಿತ್ರ, ಕಿರುತೆರೆ, ನಿರ್ಮಾಪಕ, ನಿರ್ದೇಶಕ, ತಾಂತ್ರಿಕ ವರ್ಗ ಮತ್ತು ಕಲಾವಿದರ ಗೃಹ ನಿರ್ಮಾಣ ಸಹಕಾರ ಸಂಘದ ಉದ್ಘಾಟನೆ ಹಾಗೂ ರಕ್ತದಾನ ಶಿಬಿರವನ್ನು ಜ.4ರಂದು ಆಯೋಜಿಸಿದೆ ಎಂದು ಸಂಘದ ಮುಖ್ಯ ಪ್ರವರ್ತಕ ಶಿವಾಜಿ ತಿಳಿಸಿದರು.

ಕೆ.ಆರ್.ಆಸ್ಪತ್ರೆಯಲ್ಲಿ  ಬೆಳಗ್ಗೆ 10.30ಕ್ಕೆ ನಡೆಯುವ ರಕ್ತದಾನ ಶಿಬಿರದಲ್ಲಿ ಸಹಕಾರ ಸಂಘದ ನಿರ್ದೇಶಕರೊಂದಿಗೆ ಹರೀಶ್ ಗೌಡ ಅಭಿಮಾನಿಗಳು ಭಾಗಿಯಾಗುವರು ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಚಾಲನೆಗೊಳ್ಳುವ ಸಹಕಾರ ಸಂಘದ ಸದಸ್ಯತ್ವ ಬಯಸುವ ಕಲಾವಿದರು ಸಂಘದ ಜೂಮ್ ರವಿ 8147784353, ಎಂ.ಎನ್.ಗಣೇಶ್ ಶೆಟ್ಟಿ 9845349003, ರಘು 9901476936 ಅವರನ್ನು ಮಾಹಿತಿಗಾಗಿ ಸಂಪರ್ಕಿಸಬಹುದು ಎಂದು ಕೋರಿದರು.

ಗೋಷ್ಠಿಯಲ್ಲಿ ಸಹಕಾರ ಸಂಘದ ನಿರ್ದೇಶಕರಾದ ರಘು, ಪ್ರಶಾಂತ್, ಗಣೇಶ್ ಶೆಟ್ಟಿ, ಜೂಮ್ ರವಿ ಇದ್ದರು.

Leave a Reply

comments

Related Articles

error: