
ಕರ್ನಾಟಕ
ಅಧಿಕ ಬಾರದ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡ ಲಾರಿಗಳ ಸಂಚಾರದಿಂದ ರಸ್ತೆ ಹಾಳು : ಗ್ರಾಮಸ್ಥರ ಆರೋಪ
ರಾಜ್ಯ(ಚಿಕ್ಕಬಳ್ಳಾಪುರ)ಜ.3:- ಬಾಗೇಪಲ್ಲಿ- ಗೂಳೂರು ರಸ್ತೆಯಲ್ಲಿ ಅಧಿಕ ಬಾರದ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡ ಲಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ತಿರುಗಾಡುತ್ತಿರುವುದರಿಂದ ಬಾಗೇಪಲ್ಲಿ ಗೂಳೂರು ರಸ್ತೆಗಳಲ್ಲಿ ಮೋರಿಗಳು ಕುಸಿದು ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೀಗೆ ಭಾರಿ ಗಾತ್ರದ ವಸ್ತುಗಳನ್ನು ತುಂಬಿಕೊಂಡು ಈ ರಸ್ತೆಯಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೇ ತಿರುಗಾಡುವ ಲಾರಿಗಳಿಂದ ಈ ಭಾಗದ ಜನರು ನಿತ್ಯ ನರಕ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ತಾಲೂಕಿನ ಅನೇಕ ರಸ್ತೆಗಳ ದುರಾವಸ್ಥೆಗೆ ಕಾರಣವಾಗಿವೆ. ಸಣ್ಣ ಪುಟ್ಟ ಹಾಗೂ ಸಾರಿಗೆ ಸಂಸ್ಥೆಯ ಬಸ್ಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ, ಇದರಿಂದ ಜನರು ನಿತ್ಯ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಭಾರಿ ಪ್ರಮಾಣದಲ್ಲಿ ಕಲ್ಲು ಹೊತ್ತು ಬೇರೆ ಕಡೆ ಸಾಗಿಸುವ ಲಾರಿಗಳನ್ನು ವಶಪಡಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)