ದೇಶಪ್ರಮುಖ ಸುದ್ದಿ

ಪೆಟ್ರೋಲ್ ಬಂಕ್‍ಗಳಲ್ಲಿ ಇಂದಿನಿಂದ ಹೊಸ ನೋಟು ವಿತರಣೆ

ದೇಶಾದ್ಯಂತ ನಗದು ಹಣದ ಬೇಡಿಕೆಯನ್ನು ತ್ವರಿತಗತಿಯಲ್ಲಿ ಪೂರೈಸಲು ಸಹಕಾರಿಯಾಗುವಂತೆ ಪೆಟ್ರೋಲ್ ಬಂಕ್‍ಗಳಲ್ಲಿ ಹೊಸ ನೋಟುಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ದಿನೇ ದಿನೇ ಬ್ಯಾಂಕ್‍ ಮುಂದೆ ಹಣ ನಗದೀಕರಿಸಿಕೊಳ್ಳಲು ಕ್ಯೂ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ನೂಕುನುಗ್ಗಲು ತಪ್ಪಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ. ಬೆರಳಿಗೆ ಶಾಹಿ ಹಚ್ಚುವುದು ಸೇರಿದಂತೆ ಹಣ ನಗದೀಕರಣ ಮಿತಿಯನ್ನು 4 ಸಾವಿರದಿಂದ 2 ಸಾವಿರಕ್ಕೆ ಇಳಿಸಲಾಗಿದೆ.

ಇದೀಗ ಕೆಲವು ಆಯ್ದ ಪೆಟ್ರೋಲ್ ಬಂಕ್‍ಗಳಲ್ಲಿ ಸ್ಟೇಟ್‍ ಬ್ಯಾಂಕ್ ಇಂಡಿಯಾದ ಎಟಿಎಂ ಯಂತ್ರ ಇರಿಸಲಾಗಿದ್ದು ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ. ಎಚ್‍ಡಿಎಫ್‍ಸಿ, ಸಿಟಿಬ್ಯಾಂಕ್‍ ಮತ್ತು ಐಸಿಐಸಿಐ ಬ್ಯಾಂಕ್‍ ಕೂಡ ಪೆಟ್ರೋಲ್ ಬಂಕ್‍ ಗಳಲ್ಲಿ ಎಟಿಎಂ ಯಂತ್ರಗಳನ್ನು ಇರಿಸಲು ಯೋಜಿಸಿದ್ದು ಸದ್ಯದಲ್ಲೇ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಇದಲ್ಲದೆ ಪೆಟ್ರೋಲ್ ಬಂಕ್‍ಗಳಲ್ಲಿ ಸಾಧ್ಯವಾದಷ್ಟು ಡೆಬಿಟ್ ಕಾರ್ಡ್‍ ಸ್ವೈಪ್ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಬ್ಯಾಂಕ್‍ಮುಂದೆ ಸಾಲುಗಟ್ಟಿ ನಿಂತಿರುವ ಜನ ಪೆಟ್ರೋಲ್‍ ಪಂಪ್‍ಗಳ ಕಡೆ ಬಂದರೆ ಅಲ್ಲಿಯೂ ನೂಕುನುಗ್ಗಲು ಉಂಟಾಗಬಹುದು ಎಂಬ ಆತಂಕ ಇದ್ದೇ ಇದೆ. ಆದರೆ ಬ್ಯಾಂಕ್‍ಗಳ ರಷ್‍ ತುಸು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಸರ್ಕಾರ ಇಂತಹ ಮತ್ತಷ್ಟು ಸಾರ್ವಜನಿಕ ಕೇಂದ್ರಗಳನ್ನು ಗುರುತಿಸಿ ಆಯ್ಕೆ ಅವಕಾಶ ಮಾಡಿದರೆ ಜನರು ಪಡುತ್ತಿರುವ ಪಾಡು ಕಡಿಮೆಯಾಗಬಹುದು.

Leave a Reply

comments

Related Articles

error: