ಮೈಸೂರು

ಎರಡು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ

ಮೈಸೂರು,ಜ.4:- ಎರಡು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯ 20ವರ್ಷ  ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಜ್ಞಾನಲೋಕ ಅಂಬೇಡ್ಕರ್ ಕಾಲೋನಿಯ ಸದ್ದಾಂ ಅಲಿಯಾಸ್ ಹುಸೇನ್ ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದು, ಬಾಲಕಿಯ ಅತ್ತೆಯೊಂದಿಗೆ ಅಕ್ರಮ ಸಂಪರ್ಕವಿರಿಸಿಕೊಂಡಿದ್ದ.2015ರ ನವೆಂಬರ್ 18ರ ರಾತ್ರಿ 9.30ರ ವೇಳೆ ತಿಂಡಿ ಕೊಡಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿತ್ತು. ನೋವುತಾಳಲಾರದೇ ಮಗು ಚೀರಿದಾಗ ಕತ್ತು ಹಿಸುಕಿ ಕೊಲೆಗೈದಿದ್ದ. ವಿಷಯ ತಿಳಿಯದಂತೆ ಮಗುವನ್ನು ಆಕೆಯ ಅತ್ತೆಯ ಬಳಿ ಮಲುಗಿಸಿದ್ದ.  ಮಗು ಮೃತಪಟ್ಟಿರುವುದು ಅಕ್ಕಪಕ್ಕದವರ ಗಮನಕ್ಕೆ ಬಂದಾಗ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿತ್ತು. ಆರೋಪಿಯನ್ನು ಪೋಸ್ಕೋ ಕಾಯಿದೆಯಡಿ ಬಂಧಿಸಲಾಗಿತ್ತು. ಎನ್.ಆರ್.ಠಾಣೆ ಪೊಲೀಸರು ಈ ಕುರಿತು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯ್ ಎಂ.ಪಾವಲಿ ಸಾಂದರ್ಭಿಕ ಸಾಕ್ಷಿ ಆಧಾರ ಪರಿಗಣಿಸಿ ಶಿಕ್ಷೆ ಪ್ರಕಟಿಸಿದ್ದು, ಸಿ ಆರ್ ಪಿ ಸಿ 235 ಸೆಕ್ಷನ್ ಅನ್ವಯ  20ವರ್ಷ ಕಠಿಣ ಶಿಕ್ಷೆ ನೀಡಿ ತೀರ್ಪಿತ್ತಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ  ಶಿವರುದ್ರಶ್ವಾಮಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: