ಪ್ರಮುಖ ಸುದ್ದಿಮೈಸೂರು

ಫಾಲ್ಕನ್ ಟೈರ್ಸ್ ಕಂಪನಿ ಸಮಸ್ಯೆಗೆ ಅಂತ್ಯ ಹಾಡಿ: ಕಾರ್ಮಿಕರಿಂದ ಪ್ರತಿಭಟನಾ ಜಾಥಾ

ಫಾಲ್ಕನ್ ಟೈರ್ಸ್ ಕಂಪೆನಿಯ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಫಾಲ್ಕನ್ ಟೈರ್ಸ್ ಎಂಪ್ಲಾಯಿಸ್ ಯೂನಿಯನ್‍ ಶುಕ್ರವಾರದಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿತು.

ಮೈಸೂರು ನ್ಯಾಯಾಲಯದ ಗಾಂಧಿ ಪ್ರತಿಮೆ ಮುಂಭಾಗದಿಂದ ಬೃಹತ್ ಕಾಲ್ನಡಿಗೆ ಜಾಥಾ ಆರಂಭಿಸಿದ ಕಾರ್ಮಿಕರು ರಾಮಸ್ವಾಮಿ ವೃತ್ತ, ಮೆಟ್ರೋಪೋಲ್ ವೃತ್ತದ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸರಕಾರವು ಕಂಪನಿಯನ್ನು ನಡೆಸಲು ಮಾಲೀಕರಿಗೆ ಸಂಪೂರ್ಣ ಸಹಕಾರ ನೀಡಿದ್ದರೂ ಕಂಪನಿಯ ಮಾಲೀಕರು ಕಂಪನಿಯನ್ನು ನಡೆಸುವ ನಾಟಕವಾಡಿ ಕಾರ್ಮಿಕರನ್ನು ಹಾಗೂ ಸರಕಾರವನ್ನು ವಂಚಿಸುತ್ತಿದ್ದಾರೆ. ಸರಕಾರದ ವತಿಯಿಂದ ವಿಧಾನಸೌಧದಲ್ಲಿ ಇದುವರೆಗೆ 6 ಉನ್ನತ ಮಟ್ಟದ ಸಭೆಗಳನ್ನು ನಡೆಸದಿದ್ದರೂ, ಫಲಿತಾಂಶ ಮಾತ್ರ ಶೂನ್ಯವಾಗಿರುತ್ತದೆ. ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬಂದಿದ್ದ ಸಂದರ್ಭ ಉನ್ನತ ಮಟ್ಟದ ಕರೆದು ಆ ಸಭೆಯಲ್ಲಿ ನಾನು ಕೂಡ ಭಾಗವಹಿಸುವುದಾಗಿ ಭರವಸೆ ನೀಡಿರುತ್ತಾರೆ. ಆದರೆ, ಇಲ್ಲಿಯವರೆಗೆ ಸಭೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಶೀಘ್ರದಲ್ಲೇ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಕಂಪನಿಗೆ ಸಾಲ ನೀಡಿರುವ ಹಣಕಾಸು ಸಂಸ್ಥೆ ಹಾಗೂ ಮಾಲೀಕರನ್ನು ಕರೆಸಿ ಮಾತುಕತೆ ನಡೆಸಿ, ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿರುವ ಕಂಪನಿಯನ್ನು ಪುನರಾರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಫಾಲ್ಕನ್ ಟೈರ್ಸ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ದೇವರಾಜ ಡಿ.ವಿ, ಉಪಾಧ್ಯಕ್ಷ ರವೀಂದ್ರ ಬಿ, ಜಂಟಿ ಕಾರ್ಯದರ್ಶಿ ಕಪನಿಗೌಡ, ಕಾರ್ಯದರ್ಶಿ ಕಮಾರ ಬಿ, ಖಜಾಂಚಿ ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಕಾನೂನು ಸಲಹೆಗಾರ ಮತ್ತು ಎಐಟಿಯುಸಿ ಮುಖಂಡರಾದ ಎಚ್.ಆರ್. ಶೇಷಾದ್ರಿ ಮತ್ತು ಕಾರ್ಮಿಕರ ಕುಟುಂಬಸ್ಥರು ಭಾಗವಹಿಸಿದ್ದರು.falcon-3

Leave a Reply

comments

Related Articles

error: