ಕರ್ನಾಟಕಪ್ರಮುಖ ಸುದ್ದಿ

ಕರ್ನಾಟಕದಲ್ಲೂ ಭಯೋತ್ಪಾದಕರಿದ್ದಾರೆಂದ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್

ಬೆಂಗಳೂರು,ಜ.4-ಕಾಶ್ಮೀರದಲ್ಲಷ್ಟೇ ಭಯೋತ್ಪಾದಕರಿಲ್ಲ. ಕರ್ನಾಟಕದಲ್ಲೂ ಭಯೋತ್ಪಾದಕರಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ದೀಪಕ್ ಕೊಲೆ ಕುರಿತು ಪೋಸ್ಟ್ ಮಾಡಿರುವ ಪ್ರಥಮ್, ದೀಪಕ್ ಕೊಲೆ ಮಾಡಿದವನು ಬೇವರ್ಸಿ ಬಿನ್ ಲಾಡೆನ್ ಬಾಮೈದನೇ ಇರಬೇಕು. ಇಷ್ಟು ಕ್ರೂರವಾಗಿ… ಕ್ಷೇಮೆ ಇರಲಿ ದೀಪಕ್ ಅವರೆ… ಮತ್ತೊಮ್ಮೆ ಹುಟ್ಟಿ ಬರಬೇಡಿ. ನಿಮ್ಮನ್ನು ಉಳಿಸಿಕೊಳ್ಳುವ ಶಕ್ತಿಯಾಗಲಿ, ಯೋಗ್ಯತೆಯಾಗಲಿ ನಮ್ಮಲ್ಲಿಲ್ಲ. ದೀಪಕ್ ರ ಪೋಷಕರಲ್ಲಿ ಮನವಿ… ನಾವೇನೆ ಹೋರಾಟ ಮಾಡಿದ್ರು ಸತ್ತೋಗಿರೋ ನಿಮ್ಮ ಮಗನನ್ನ ಉಳಿಸಲು ಸಾಧ್ಯವಿಲ್ಲ. ದುಃಖವನ್ನು ತೆಡೆದುಕೊಳ್ಳೋ ಶಕ್ತಿ ಕೊಡಲಿ ಅಂತ ಮಾತ್ರ ಹೇಳಲ್ಲ. ನಾವೆಲ್ಲರೂ ನಿಮ್ಮ ಮಕ್ಕಳೆ… ದಯವಿಟ್ಟು ದುಡುಕಿ ಯಾವ ತಪ್ಪು ನಿರ್ಧಾರಕ್ಕೂ ಇಳಿಯಬೇಡಿ. ಏನ್ ನಡಿತಾ ಇದೆ ಕರ್ನಾಟಕದಲ್ಲಿ? @ purposefully asking ಎಂದು ಘಟನೆ ಕುರಿತು ಫೇಸ್ ಬುಕ್ ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಪ್ರಥಮ್ ಅವರ ಈ ಪೋಸ್ಟ್ ಗೆ ಆದಿ ಗೌಡ ಕನ್ನಡಿಗ ಎಂಬವರು ಟಾಂಗ್ ನೀಡಿದ್ದು, ದಾನಮ್ಮಳ ಕೊಲೆ ನಡೆದಾಗ ಅವರು ಭಯೋತ್ಪಾದಕರ ರೀತಿಯಲ್ಲಿ ಕಾಣಲಿಲ್ಲವೇ, ಲವ್ ಜಿಹಾದ್ ಹೆಸರಿನಲ್ಲಿ ರಾಜಸ್ತಾನದಲ್ಲಿ ಜೀವಂತ ದಹನ ಮಾಡಿದಾಗ ಅವರು ಭಯೋತ್ಪಾದಕರಾಗಿ ಕಾಣಲಿಲ್ಲವೇ? ಮುಸ್ಲಿಮರು ಹತ್ಯೆ ಮಾಡಿದರೆ ಮಾತ್ರ ಭಯೋತ್ಪಾದಕರು ಎಂದು ಬಿಂಬಿಸುವ ನಿನ್ನ ಧರ್ಮಾಂಧತೆಗೆ ನನ್ನ ಧಿಕ್ಕಾರವಿರಲಿ.. ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲಿ ಸಾವಿನ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಇದರಿಂದ ಆಕ್ರೋಶಗೊಂಡ ಪ್ರಥಮ್ ಅವಾಚ್ಯಾ ಶಬ್ಧದಿಂದಲೇ ಆದಿಗೌಡ ಕನ್ನಡಿಗನಿಗೆ ತಿರುಗೇಟು ನೀಡಿದ್ದಾರೆ. ಲೋ ಆದಿ ಗೌಡ ಕನ್ನಡಿಗ ನೋ ಅವಿವೇಕಿ ಗೌಡನೋ… ಬೇವರ್ಸಿ ಮುಂಡೇದೆ ಕೇಳು… ತಪ್ಪು ಯಾರೇ ಮಾಡಿದ್ರೂ ಅದನ್ನ ಅತ್ಯುಗ್ರ ಶಿಕ್ಷೆ ಆಗ್ಲಿ ಅಂತ ವಿರೋಧಿಸಿದ್ದೇನೆ. ದಾನಮ್ಮನ ವಿಚಾರದಲ್ಲೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇನೆ. ಕೊಲೆ ಮಾಡಿದವನಿಗೆ ಭಯೋತ್ಪಾದಕ ಅಂದಿದ್ದಕ್ಕೆ ನಿಮ್ಗೇನಾದ್ರೂ ಉರಿನಾ? ನನಗೆಲ್ಲೋ ಕೊಲೆಗಾರನಿಗೆ ಸರ್ಪೋಟ್ ಮಾಡೋದು ನೋಡಿದ್ರೆ ನೀವೂ ಯಾಕೋ? ಅನುಮಾನ… ಬಹಳ ಬುದ್ಧಿವಂತಿಕೆಯಿಂದ ನಿಮ್ಮ ಫೋಟೋ ಹಾಕದೇ… (ಯೋಗ್ಯತೆ ಇಲ್ಲದೆ) ಬೇರೆ ಫೋಟೋ ಹಾಕಿದ್ದೀರಾ… ಸೇಫ್ಟಿಗೆ ಹೆಸರು ನೋಡಿದ್ರೂ ಅನುಮಾನ… ಒಟ್ಟಿನಲ್ಲಿ ಸೆಕ್ಯೂಲರ್ ಮಂತ್ರ ನನ್ನ ಹತ್ತಿರ ನಡೆಯಲ್ಲ. ಮತ್ತೊಮ್ಮೆ ಹೇಳ್ತೀನಿ ಕೊಲೆಗಾರನದ್ದು ಭಯೋತ್ಪಾದಕ ಕೃತ್ಯ…ಸಾಧ‍್ಯವಾದರೆ…ಕೈಲಿ ಆದರೆ…ಕಾದೇನೋ ಕಿತ್ತಾಕಳಿ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಥಮ್ ರ ಈ ಪ್ರತಿಕ್ರಿಯೆ ನೋಡಿ ಸಿಟ್ಟಿಗೆದ್ದ ಆದಿ ಗೌಡ ಕನ್ನಡಿಗ ಕೂಡ ಆವಾಚ್ಯ ಶಬ್ಧಗಳಿಂದ ಪ್ರಥಮ್ ಗೆ ತಿರುಗೇಟು ನೀಡಿದ್ದು, ಒಳ್ಳೆ ಹುಡುಗ ಪ್ರಥಮ್ ನಾನು ಬಯ್ಯೋದಕ್ಕೆ ಶುರು ಮಾಡಿದ್ರೆ ಖಂಡಿತ ನನ್ನ ನೀನು ಬ್ಲಾಕ್ ಮಾಡ್ತೀಯ..ಲೋ ಗುಬಾಲ್ ನನ್ನ ಮಗನೆ ಬಿಜೆಪಿಗೆ ಬಕೇಟ್ ಹಿಡಿಯೋದು ನಿನ್ನ ಈ ಕಂತ್ರಿ ನಾಯಿ ಹುಚ್ಚು ಬುದ್ಧಿ ನನ್ನ ಹತ್ರ ಇಟ್ಕೋಬೇಡ. ನನ್ನ ಐಡಿ ಕಾರ್ಡ್ ಬೇಕ ಹೇಳು. ವಿಳಾಸ ಸಮೇತ ಹಾಕುವೆ ಎಂದಿದ್ದಾರೆ. ಅಲ್ಲದೆ, ನಾನು ಹೇಳಿದ್ದು, ಭಯೋತ್ಪಾದಕ ಎಂಬ ಶಬ್ಧವನ್ನು ಬಳಸಿದಕ್ಕೆ ಮಂಗ… ಮೊದಲು ಕಾಮೆಂಟ್ ಅರ್ಥ ಮಾಡ್ಕೋಳಿ ಎಂದಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: