ಸುದ್ದಿ ಸಂಕ್ಷಿಪ್ತ

ಸಹಕಾರ ಸಂಘ ಸಮಾಪನೆ; ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಮೈಸೂರು, ಜ.4:-  ಮೈಸೂರು ಉಪವಿಭಾಗದ ಕಾರ್ಯವ್ಯಾಪ್ತಿಯಲ್ಲಿ ಎಸ್.ಬಿ.ಎಂ.ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಹಾಗೂ ನಿಯಮ 1960 ಹಾಗೂ ಸಹಕಾರ ಸಂಘಗಳ ಉಪನಿಯಮಗಳ (ಬೈಲಾ) ರೀತ್ಯಾ ಸಂಘದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೇ ಸ್ಥಗಿತಗೊಂಡಿರುತ್ತದೆ. ಸಂಘದ ಆಡಳಿತ ಮಂಡಳಿ ಸಭೆ ನಡೆಸದೇ ವಾರ್ಷಿಕ ಮಹಾಸಭೆ ನಡೆಸದೇ ಇರುವುದು ಸಂಘದ ಬೈಲಾ ಮತ್ತು ಕಾನೂನಿಗೆ ವಿರುದ್ಧವಾಗಿರುತ್ತದೆ.
ಸದರಿ ಸಹಕಾರ ಸಂಘವನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 72 ರನ್ವಯ ಸಮಾಪನೆಗೊಳಿಸಲು ಉದ್ದೇಶಿಸಿದ್ದು, ಸಂಘದ ಸದಸ್ಯರ ಹಿತದೃಷ್ಟಿಯಿಂದ ಮತ್ತೊಮ್ಮೆ ಸದರಿ ಸಂಘವನ್ನು ಪುನರುಜ್ಜೀವನಗೊಳಿಸಿಕೊಂಡು ಮುಂದುವರೆಸಿಕೊಂಡು ಹೋಗುವ ಬಗ್ಗೆಯಾಗಲೀ ಅಥವಾ ಸಮಾಪನೆಗೊಳಿಸುವುದರ ವಿರುದ್ಧ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಲಿಖಿತದ ಮೂಲಕವಾಗಲೀ ಅಥವಾ ಖುದ್ದಾಗಿ ಮನವಿಯನ್ನು ಈ ಪ್ರಕಟಣೆ ಪ್ರಕಟಗೊಂಡ 15 ದಿವಸಗಳ ಒಳಗೆ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಯವುದೇ ಅಹವಾಲುಗಳು / ಆಕ್ಷೇಪಣೆಗಳು ಲಿಖಿತ ಮನವಿಗಳು ಸ್ವೀಕೃತವಾಗದಿದ್ದ ಪಕ್ಷದಲ್ಲಿ ಸಂಘವನ್ನು ಸಮಾಪನೆಗೊಳಿಸಲು ಕ್ರಮವಹಿಸಲಾಗುವುದು ಎಂದು ಮೈಸೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: