ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಜ.4:-  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ಸೌತ್ (ದಕ್ಷಿಣ) ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಇಂಡಸ್ಟ್ರೀಯಲ್ ಫೀಡರ್ ಮತ್ತು ಎನ್.ಜೆ.ವೈ. ಜ್ವಾಲಾಮುಖಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 5 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಇಂಡಸ್ಟ್ರೀಯಲ್ ಸಬರ್ಬ್ 1ನೇ, 2ನೇ ಮತ್ತು 3ನೇ ಹಂತ, ವೀವರ್ಸ್ ಕಾಲೋನಿ, ಪೋಸ್ಟಲ್ ಕಾಲೋನಿ, ಸ್ಟರ್ಲಿಂಗ್ ಥಿಯೇಟರ್, ಬಂಡಿಪಾಳ್ಯ, ಹೊಸಹುಂಡಿ, ಗುಡುಮಾದನಹಳ್ಳಿ, ಏಳಿಗೆಹುಂಡಿ, ಉತ್ತನಹಳ್ಳಿ, ಗೆಜ್ಜಗಳ್ಳಿ, ಮಂಡಕಳ್ಳಿ, ಹಡಜನ, ಮಾರಿಶೆಟ್ಟಿಹಳ್ಳಿ, ಟಿ.ಎಂ.ಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: