ಮೈಸೂರು

ವಿಕಲಚೇತನರು ಕೀರಳಿಮೆ ತೊರೆದು ಮುಂದೆ ಬರಬೇಕು: ಕುಲಪತಿ ಪ್ರೊ.ಸಿ.ಬಸವರಾಜು

ದೃಷ್ಟಿಹೀನರಲ್ಲಿ ಅಸಾಮಾನ್ಯ ಗ್ರಹಣಶಕ್ತಿ, ಪ್ರತಿಭೆಯನ್ನು ಉದಾಹರಣೆಯಾಗಿ ಕಾಣಬಹುದು

ಮೈಸೂರು, ಜ.4: 209ನೇ ಲೂಯಿಸ್ ಬ್ರೈಲ್ ಜಯಂತೋತ್ಸವ ಹಾಗೂ ವಿಕಲವಿಕಾಸ ಲೂಯಿಸ್ ಬ್ರೈಲ್ ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರ ಪತ್ರಕರ್ತರ ಭವನದಲ್ಲಿ ನಡೆಯಿತು.

ಮೈಸೂರು ವಿವಿಯ ಕುಲಪತಿ ಪ್ರೊ.ಸಿ.ಬಸವರಾಜು ಅವರು ಲೂಯಿಸ್ ಪಾಶ್ಚರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿಕಲಚೇತನರಲ್ಲಿರುವ ಉತ್ಕೃಷ್ಟ ಜ್ಞಾನ ಸಾಮಾನ್ಯರಲ್ಲಿಲ್ಲ. ಅವರಲ್ಲಿ, ದೃಷ್ಟಿ ಇಲ್ಲವೆನ್ನುವುದನ್ನು ಬಿಟ್ಟರೆ ವಿಷಯ ಗ್ರಹಿಕೆಯಲ್ಲಿ ಸಾಮಾನ್ಯರಿಗಿಂತ ಮುಂದಿದ್ದಾರೆ. ಪ್ರಾಮಾಣಿಕ ಪ್ರಯತ್ನದಿಂದ ಶ್ರೇಷ್ಠ ಸ್ಥಾನ ಪಡೆಯುತ್ತಿದ್ದು, ಸಮಾಜದ ಸರ್ವಾಗೀಣಾಭಿವೃದ್ಧಿಗೆ ಅವರ ಸೇವೆ ಅತ್ಯಮೂಲ್ಯ. ಸಮಾಜವು ಅವರನ್ನು ವಿಶೇಷ ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ವಿಕಲಚೇತನರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೈಸೂರು ವಿವಿಯಿಂದ ಬಿ.ಎ. ಬಿಎಸ್ಸಿ ಪಠ್ಯಕ್ರಮವನ್ನು ಬ್ರೈನ್ ಲಿಪಿಯಲ್ಲಿ ತಯಾರಿಸಲಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಶುಲ್ಕದಲ್ಲಿ ರಿಯಾಯಿತಿ ನೀಡಲು ವಿವಿ ಚಿಂತನೆ ನಡೆಸಿದೆ ಎಂದರು.

ಯಾರೊಬ್ಬರೂ ಕೀಳರಿಮೆ ಬೆಳೆಸಿಕೊಳ್ಳಬಾರದು. ನಿಮ್ಮಲ್ಲಿರುವ ಪ್ರತಿಭೆ ಅಸಾಧಾರಣ. ದೃಢಸಂಕಲ್ಪದಿಂದ ಸಾಧನೆ ಮಾಡಿ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪ್ರಸ್ತಕ ದಿನಗಳಲ್ಲಿ ಪದವಿಗಳಲ್ಲಿ ಸ್ವರ್ಣ ಪಡೆಯುವ ಮೂಲಕ ವಿಕಲಚೇತನರು ಇತರರಿಗೆ ಮಾದರಿಯಾಗಿದ್ದು, ಸಾಮಾನ್ಯರಂತೆ ಸಾಮರ್ಥ್ಯ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ವಿಕಲ ವಿಕಾಸ ಲೂಯಿ ಬ್ರೈಲ್ ಪ್ರಶಸ್ತಿಯನ್ನು ಡೆಕ್ಕನ್‍ ಹೆರಾಲ್ಡ್ ಪತ್ರಿಕೆಯ ಛೀಫ್‍ ಕಾಪಿ ಎಡಿಟರ್‍ ದೃಷ್ಟಿ ವಿಕಲಚೇತನರಾದ ಎಲ್‍ ಸುಬ್ರಹ್ಮಣಿ ಅವರಿಗೆ ಪ್ರೊ.ಸಿ.ಬಸವರಾಜು ಅವರು ಪ್ರದಾನ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಫಾದರ್ ರೆವೆರಡ್‍ ಲೆಸ್ಲಿ ಮೊರಸ್, ಪತ್ರಕರ್ತ ಟಿ.ಆರ್‍.ಸತೀಶ್ ಉಪಸ್ಥಿತರಿದ್ದರು.

(ವರದಿ : ಕೆ.ಎಂ.ಆರ್ಪಿ)

Leave a Reply

comments

Related Articles

error: