ಮೈಸೂರು

ನಿವೇಶನ ಹಂಚದೆ ಶೋಷಿತ ವರ್ಗಗಳಿಗೆ ವಂಚನೆ : ಆರೋಪ

ಮೈಸೂರು, ಜ.4 : ಹುಣಸೂರು ನಗರಸಭಾ ವ್ಯಾಪ್ತಿಯಲ್ಲಿ ಕಳೆದ 23 ವರ್ಷಗಳಿಂದ ಆಶ್ರಯ ನಿವೇಶನ ಹಂಚದೆ ಶೋಷಿತ  ಬಡ ಕುಟುಂಬಗಳಿಗೆ ವಂಚನೆಯಾಗಿದೆ ಎಂದು ಸತ್ಯ ಎಂ.ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಆರೋಪಿಸಿದರು,

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುಣಸೂರು ತಾಲ್ಲೂಕಿನಲ್ಲಿ ಕಳೆದ 1994ರಲ್ಲಿ  ವರ್ಷಗಳಿಂದ ಆಯ್ಕೆ ಯಾದ ಜನ ಪ್ರತಿನಿಧಿ ಗಳಿಂದ ನಿರ್ಲಕ್ಷ್ಯಕ್ಕೊಳಗಾದ ನಿವೇಶನ ವಂಚಿತ ಬಡ ಕುಟುಂಬಗಳು,

ಹುಣಸೂರು ನಗರಸಭಾ ವ್ಯಾಪ್ತಿಯ 1994 ರಿಂದ ಈಚೆಗೆ ಸುಮಾರು 6 ಜನ ರೈತರುಗಳಿಂದ ವಿವಿಧ ಸರ್ವೆ ನಂಬರುಗಳಲ್ಲಿ ಒಟ್ಟು 22 ಎಕರೆ  24 ಗುಂಟೆ ಜಮೀನನ್ನು ಎಕರೆ ಒಂದಕ್ಕೆ 27 ಸಾವಿರ ರೂ ಗಳಂತೆ ಖರೀದಿಸಲಾಗಿದೆ,

ಅಂದು ಜಮೀನು ನೀಡಿದ ಕುಟುಂಬಗಳಿಗೆ ನಿವೇಶನ ಕೊಡುವುದಾಗಿ ಮತ್ತು ಕಡಿಮೆ ಬೆಲೆಗೆ ಜಮೀನು ಖರೀದಿಸಿದ್ದರೂ ಇದುವರೆಗೂ ನಿವೇಶನಗಳನ್ನು ಹಂಚಿರುವುದಿಲ್ಲ,

2004 ರಲ್ಲಿ 870 ನಿವೇಶನ ಫಲಾನುಭವಿಗಳಿಗೆ ಹಕ್ಕು ಪತ್ರ ಹಂಚಲಾಗಿದ್ದರು ಭೌತಿಕವಾಗಿ ನಿವೇಶನ ಹಸ್ತಾಂತರ ಮಾಡಿರುವುದಿಲ್ಲ , ಆನಂತರ ದಿನಗಳಲ್ಲಿ ಸರ್ಕಾರದಿಂದ ಯಾವುದೇ ನಿವೇಶನ ಹಂಚಿಕೆಯಾಗಿಲ್ಲ, ಹೀಗಿದ್ದರೂ ಸರ್ಕಾರ ಮತ್ತೊಮ್ಮೆ ಭೂ ಮಂಜೂರಾತಿಗೆ ಮುಂದಾಗಿರುವುದು ಸಮ್ಮತ್ತವಲ್ಲವೆಂದ ಅವರು,  ಇಂದಿಗೂ ನಗರದ ಹಲವಾರು ಬಡಾವಣೆಗಳು ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ, ಸೂಕ್ತ ಆರೋಗ್ಯ ಕೇಂದ್ರ, ಐಟಿಐ, ಡಿಪ್ಲೋಮೊ ಇಂಜಿನಿಯರಿಂಗ್ ಕಾಲೇಜುಗಳಿಲ್ಲದೇ ಜನಸಾಮಾನ್ಯರು ಸರ್ಕಾರ ಯೋಜನೆಗಳಿಂದ ವಂಚಿತರಾಗಿದ್ದರಲ್ಲಾದೆ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ವಿಷಾಧಿಸಿದರು.

ನಿವೇಶನ ವಂಚಿತರಿಗೆ ನ್ಯಾಯ ಒದಗಿಸಲು ಸತ್ಯ ಫೌಂಡೇಷನ್  ಮತ್ತು ನಿವೇಶನ ವಂಚಿತರ ಸಹಯೋಗದಲ್ಲಿ  27 ವಾರ್ಡ್‌ ಗಳಲ್ಲೂ ಜಾಗೃತಿ ಮೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುಲಾಗುವುದು,  ಸೂಕ್ತ ನ್ಯಾಯ ದೊರಕದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು,

ಕಳೆದ ಚುನಾವಣೆ ವೇಳೆ ನೀಡಿದ ಭರವಸೆಗಳನ್ನೇ ಈಡೇರಿಸದ ಜನಪ್ರತಿನಿಧಿಗಳು ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಮತ್ತೊಮ್ಮೆ ಹೊಸ ಹೊಸ ಸುಳ್ಳು ಭರವಸೆ ಆಸೆ ಆಮಿಷಗಳನ್ನು ಒಡ್ಡುತ್ತಿದ್ದು ಇದರಿಂದ ಮತದಾರರು ಜಾಗೃತರಾಗಬೇಕೆಂದು ಆಶಿಸಿದರು.

ಹುಣಸೂರಿನಲ್ಲಿ ನಡೆದ ಹನುಮ ಜಯಂತಿಯೂ ವೇಳೆಯಲ್ಲಿ ನಡೆದ ಗೊಂದಲ ರಾಜಕೀಯ ಪ್ರೇರಿತವಾಗಿದ್ದು, ಶಾಸಕ ಮತ್ತು ಸಂಸದರ ರಾಜಕೀಯ ಮೇಲಾಟದಿಂದ ಹುಣಸೂರಿಗೆ ಕಪ್ಪು ಚುಕ್ಕೆಯಾಗಿದೆ, ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಜನಪ್ರತಿನಿಧಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಷಾಧನೀಯವೆಂದರು.

ಸುದ್ದಿ ಗೋಷ್ಠಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ವೇದಿಕೆಯ ಗೌರವಧ್ಯಕ್ಷರಾದ ಕೆಎಸ್ ನರಸಿಂಹಮೂರ್ತಿ, ರೈತ ಮುಖಂಡರಾದ ಬಸಪ್ಪ ಹಂದನಹಳ್ಳಿ, ಮತ್ತು ಶ್ರೀಧರ್ ರವರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್ಪಿ)

Leave a Reply

comments

Related Articles

error: