ಮೈಸೂರು

ಜ.7ರಂದು ರಾಜ್ಯಮಟ್ಟದ ಯೋಗ ಸ್ಪರ್ಧೆ

ಮೈಸೂರು, ಜ.4 : ಕರ್ನಾಟಕ ಗ್ರಾಮೀಣ ಕ್ರೀಡಾ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯ್ ಕುಮಾರ್ ಅರವರು ತಿಳಿಸಿದರು ,

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಜನವರಿ 7 ರಂದು ಗೋಕುಲಂನಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ರಾಜ್ಯಮಟ್ಟದ ಯೋಗ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯನ್ನು ಅಥ್ಲೆಟಿಕ್ ಮತ್ತು ಆರ್ಟಿಸ್ಟಿಕ್ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಿಂದ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ವಿಜೇತರನ್ನು ಜನವರಿ 21 ರಂದು ಚೆನೈನಲ್ಲಿ ನೆಡೆಯಲಿರುವ ಯೋಗ ಸ್ಪರ್ಧೆಗೆ ಕಳುಹಿಸಲಾಗುವುದು , ಮತ್ತು ಮುಂಬರುವ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧಗಳಲ್ಲಿ ಭಾಗವಹಿಸಬಹುದು , ಪ್ರವೇಶ ದರ 500 ರೂ ಗಳಿದ್ದು , ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಶಿವಪ್ರಕಾಶ್ , ವಿನೋದ್, ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್ಪಿ)

Leave a Reply

comments

Related Articles

error: