ಮೈಸೂರು

ನಿಜವಾದ ಜೀವನ ನಿವೃತ್ತಿಯ ಬಳಿಕ ಆರಂಭವಾಗುತ್ತದೆ: ಪ್ರೊ.ಎಮ್. ಕೃಷ್ಣೇಗೌಡ

ಜೀವನವು ಬಾಲ್ಯ, ಯೌವ್ವನ ಮತ್ತು ವೃದ್ಧಾಪ್ಯವನ್ನು ಹೊಂದಿದೆ. ಪ್ರತಿಯೊಂದು ಘಟ್ಟವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕಳೆದುಹೋದ ವಯಸ್ಸಿನ ಬಗ್ಗೆ ಗೊಣಗುವ ಬದಲು ವೃದ್ಧಾಪ್ಯವನ್ನು ಸುಂದರವಾಗಿ ಕಾಣಲು ಯತ್ನಿಸಬೇಕು. ಯುವಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರ ಜೊತೆಗೆ ತಮ್ಮದೇ ವಯಸ್ಸಿನವರೊಂದಿಗೆ ಸಮವಾಗಿ ಬೆರೆಯುವುದು ವೃದ್ಧಾಪ್ಯದ ಪ್ರಮುಖ ಆದ್ಯತೆಯಾಗಿರಬೇಕು. ನಿಜವಾದ ಜೀವನ ನಿವೃತ್ತಿಯ ಬಳಿಕ ಆರಂಭವಾಗುತ್ತದೆ ಎಂದು ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಮ್.ಕೃಷ್ಣೇಗೌಡ ಅವರು ಅಭಿಪ್ರಾಯಪಟ್ಟರು.

ಶಾರದಾದೇವಿನಗರದಲ್ಲಿರುವ ಬ್ಯಾಂಕರ್ಸ್ ರಿಕ್ರಿಯೇಷನಲ್ ಕ್ಲಬ್ ನಲ್ಲಿ ಗುರುವಾರದಂದು ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಸಾಧನೆಯನ್ನು ಶ್ಲಾಘಿಸಿದ ಅವರು ‘ಅರ್ಹರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ’ ಎಂದರು.

ಕ್ಲಬ್ ಅಧ್ಯಕ್ಷ ಎನ್. ಸೋಮನಾಥ್, ಎಚ್. ಬಾಲಕೃಷ್ಣ, ಎ.ಸಿ. ನಾಗರಾಜು ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: