ಮೈಸೂರು

ನಿವೇಶನ, ಸಾಗುವಳಿ ಪತ್ರ ನೀಡುವಂತೆ ಆಗ್ರಹ: ಪ್ರತಿಭಟನೆ

ಭಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡುವಂತೆ ಹಾಗೂ ಸ್ವಂತ ಸೂರಿಲ್ಲದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಐಟಿಯು ಕಾರ್ಮಿಕ ಸಂಘಟನೆಗಳು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.

ಕಂದಾಯ ಭೂಮಿ ಗೋಮಾಳ ಮತ್ತು ಅರಣ್ಯಭೂಮಿಗಳಲ್ಲಿ ಕಳೆದ 40-50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಇದುವರೆಗೂ ಸಾಗುವಳಿ ಪತ್ರ ನೀಡಿಲ್ಲ. ನಮೂನೆ 5-53ರಲ್ಲಿ ಭಗರ್‍ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಪತ್ರ ನೀಡದೆ ಸರಕಾರ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈಗಲಾದರೂ ಸರಕಾರ ಇತ್ತ ಗಮನಹರಿಸಿ ಭಗರ್‍ಹುಕುಂ ಸಾಗುವಳಿ ಪತ್ರ ನೀಡಲು ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಿ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಂ, ಕೆ.ಬಸವರಾಜು ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: