ಮೈಸೂರು

ಕೆ.ಆರ್.ಆಸ್ಪತ್ರೆ ಆವರಣದ ಸ್ವಚ್ಛತಾ ಕಾರ್ಯ ನ.20ರಂದು

ಎಚ್.ವಿ. ರಾಜೀವ್ ಸ್ನೇಹ ಬಳಗದ 125ನೇ ವಾರದ ಸ್ವಚ್ಛತಾ ಆಂದೋಲನ ಆಚರಣೆ ಮತ್ತು ಶ್ರೀ ಕಲ್ಕಿ ಮಾನವ ಸೇವಾ ಸಮಿತಿಯ ಸ್ವಚ್ಛತಾ ಅಭಿಯಾನದ 100ನೇ ವಾರದ ಆಚರಣೆಯ ಅಂಗವಾಗಿ ನ.20ರಂದು ಕೆ.ಆರ್.ಆಸ್ಪತ್ರೆ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಎಚ್.ವಿ.ರಾಜೀವ್ ಹೇಳಿದರು.

ಶುಕ್ರವಾರ ನಗರದ ಪತ್ರಕರ್ತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛತಾ ಅಭಿಯಾನದಲ್ಲಿ ರಾಜೀವ್ ಸ್ನೇಹ ಬಳಗದ ಜೊತೆ ಕಲ್ಕಿ ಮಾನವ ಸೇವಾ ಸಮಿತಿ, ನಿಮ್ಮ ಖುಷಿ ಟ್ರಸ್ಟ್, ಗುರು ರಾಘವೇಂದ್ರ ಮಿತ್ರ ಯುವಕರ ಮಂಡಳಿ, ಪ್ರಮತಿ ಅಕಾಡೆಮಿ, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ, ಸ್ಪಂದನ ಟ್ರಸ್ಟ್, ಲಯನ್ಸ್ ಕ್ಲಬ್ ಇನ್ನೂ ಮೊದಲಾದ ಶಿಕ್ಷಣ ಸಂಸ್ಥೆಗಳು ಮತ್ತು ಟ್ರಸ್ಟ್ ಗಳು ಭಾಗವಹಿಸಿದ್ದಾರೆ. ಈ ನ.20 ಕ್ಕೆ 125 ವಾರ ಪೂರ್ಣಗೊಳ್ಳುವುದರಿಂದ ಕೆ.ಆರ್.ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ರಾಜಗೋಪಾಲ್, ರಾಜೇಶ್, ಚಿಕ್ಕಮ್ಮ ಬಸವರಾಜು, ಮತ್ತು ಕಲ್ಕಿ ಮಾನವ ಸೇವಾ ಸಮಿತಿಯ ಸುರೇಶ್ ಮತ್ತು ಕಾಂಚನಾ ಹಾಜರಿದ್ದರು.

Leave a Reply

comments

Related Articles

error: