ಮೈಸೂರು

ಡಾಂಬರ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವನ್ನು ರಕ್ಷಿಸಿದ ಅಗ್ನಿಶಾಮಕ ಆರಕ್ಷಕ

ಮೈಸೂರು,ಜ.5:- ಡಾಂಬರ್‌‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವನ್ನು ನೋಡಿದ ಸಾರ್ವಜನಿಕರು ಉರಗತಜ್ಞರಿಗೆ ತಿಳಿಸಿ ಹಾವಿನ ರಕ್ಷಣೆ ಮಾಡಿದ್ದಾರೆ.

ಮೈಸೂರಿನ ಆರ್‌ಬಿಐ ಕಾಲೋನಿಯಲ್ಲಿ ಶುಕ್ರವಾರ ಬೆಳಿಗ್ಗೆ ನಾಗರ ಹಾವೊಂದು ಡಾಂಬರ್‌‌ನಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಮೈತುಂಬ ಡಾಂಬರ್ ಅಂಟಿಕೊಂಡ ಕಾರಣ ತೆವಳಲಾಗದೇ ಸಂಕಷ್ಟಕ್ಕೊಳಗಾಗಿತ್ತು.  ಹಾವನ್ನು ಕಂಡು ಸ್ಥಳೀಯರು ರಕ್ಷಣೆಗೆ ಮುಂದಾದರು. ಉರಗತಜ್ಞ ಕೆಂಪರಾಜು ಅವರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕಾಗಮಿಸಿದ ಅವರು ಹಾವನ್ನು ರಕ್ಷಿಸಿ ಹಾವಿನ ಮೈಮೇಲಿದ್ದ ಡಾಂಬರ್ ನ್ನು ಶುಚಿಗೊಳಿಸಿದರು. ಹಾವಿಗೆ ನೀರು ಕುಡಿಸಿ ಮಾನವೀಯತೆ ಮೆರೆದರು. ಅಗ್ನಿಶಾಮಕ ಇಲಾಖೆಯಲ್ಲಿ ಆರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಹಾವು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿದ್ದರು. ಕೆಂಪರಾಜು ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: