ಸುದ್ದಿ ಸಂಕ್ಷಿಪ್ತ

ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಮೈಸೂರು,ಜ.5:- ಸಾಮಾಜಿಕ ವಲಯದ ನಿರ್ಣಾಯಕ ಕ್ಷೇತ್ರಗಳಾದ ಶಿಕ್ಷಣ, ಅಭಿವೃದ್ಧಿ ಹಾಗೂ ಸಂಬಂಧಿಸಿದ ವಲಯಗಳಿಗೆ ಕೊಡುಗೆ ನೀಡಲು ಆಸಕ್ತರಾದ ಪದವೀಧರಹಾಗೂ ಕಾರ್ಯಾನುಭವವುಳ್ಳ ಪದವೀಧರರಿಂದ ಅರ್ಜಿಯನ್ನು ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯ ತನ್ನ ಸ್ನಾತಕೋತ್ತರ ಕೋರ್ಸುಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಎರಡು ವರ್ಷಗಳ ಅವಧಿಯ ಈ ಸ್ನಾತಕೋತ್ತರ ಕೋರ್ಸುಗಳು (M.A. Education, M.A. Development, M.A. Public Policy & Governance) ಹಾಗೂ ಒಂದು ವರ್ಷದ ಅವಧಿಯ ಎಲ್ಎಲ್.ಎಂ ಹಾಗೂ ಅಭಿವೃದ್ಧಿ ವಿಷಯ (LL.M. in Law and Development) ಕುರಿತ ಕೋರ್ಸುಗಳು ಭಾರತೀಯ ಶಿಕ್ಷಣ ರಂಗಕ್ಕೆ ಮತ್ತು ಸಾಮಾಜಿಕ ವಲಯಕ್ಕೆ ಮಹತ್ತರ ಕೊಡುಗೆಯನ್ನು ನೀಡುವಂಥ ಸಮರ್ಥರನ್ನು ಮತ್ತು ವೃತ್ತಿಪರರನ್ನು ರೂಪಿಸುವ ಗುರಿಯನ್ನು ಹೊಂದಿವೆ.
ಪೋಷಕರ ಶೈಕ್ಷಣಿಕ ಮಟ್ಟ, ಆದಾಯ, ಜಾತಿ, ಲಿಂಗ ಇವುಗಳನ್ನಾಧರಿಸಿದ ಸೌಲಭ್ಯ ವಂಚಿತ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ನೆರವು ನೀಡುವ ಸುಸ್ಪಷ್ಟ ಬದ್ಧತೆಯನ್ನು ವಿಶ್ವವಿದ್ಯಾನಿಲಯಹೊಂದಿದೆ. ಅರ್ಹವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಸಂಪೂರ್ಣ ಅಥವಾ ಭಾಗಶಃ ಶಿಷ್ಯವೇತನವನ್ನು ಶಿಕ್ಷಣ ಶುಲ್ಕ, ವಸತಿ ವೆಚ್ಚ ಹಾಗೂ ಊಟ/ತಿಂಡಿಗಳ ವೆಚ್ಚಕ್ಕಾಗಿ ನೀಡಲಿದೆ.

ವಿಶ್ವವಿದ್ಯಾನಿಲಯವು ಪ್ರಮುಖ ಕೋರ್ಸುಗಳ ಪಠ್ಯಕ್ರಮವನ್ನು ಹೊಂದಿದ್ದು, ಇದರ ಮೂಲಕ ಭದ್ರ ಬುನಾದಿಯನ್ನು ದೊರಕಿಸಿಕೊಳ್ಳುವ ವಿಶಿಷ್ಟ ಕಲಿಕಾಕ್ರಮವನ್ನು ಒದಗಿಸಲಿದೆ. ಈ ಪಠ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅಂತರ್ಶಿಸ್ತೀಯ/ ವಿಷಯಾಧಾರಿತ ಐಚ್ಛಿಕ ವಿಷಯಗಳಿದ್ದು, ಸ್ವತಂತ್ರ ಅಧ್ಯಯನ (Independent study) ಆಯ್ಕೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಇಷ್ಟದ ವಿಷಯಗಳ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಪ್ರವೇಶ ಪ್ರಕ್ರಿಯೆ ಮತ್ತು ದಿನಾಂಕ: ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ವೆಬ್ಸೈಟ್ಮೂಲಕ ಆನ್ಲೈನ್ನಲ್ಲೇ ಅರ್ಜಿಸಲ್ಲಿಸಬಹುದು. ನಂತರ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ನಡೆಸಿ, ಇವುಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸಲಾಗುವುದು. ಸ್ನಾತಕೋತ್ತರ ಮತ್ತು ಎಲ್ಎಲ್.ಎಂ ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಜನವರಿ 26, 2018ಕೊನೆಯ ದಿನ. ನಂತರ, ಫೆಬ್ರವರಿ 10, 2018ರಂದು ದೇಶದ 32 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮತ್ತು 2018ರ ಮಾರ್ಚ್ತಿಂಗಳಲ್ಲಿ ವೈಯಕ್ತಿಕ ಸಂದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯ, ಪಿಕ್ಸೆಲ್ಪಾರ್ಕ್, `ಬಿ’ ಬ್ಲಾಕ್, ಪಿಇಎಸ್ಕ್ಯಾಂಪಸ್, ಎಲೆಕ್ಟ್ರಾನಿಕ್ಸ್ಸಿಟಿ, ಹೊಸೂರುರಸ್ತೆ, ಬೆಂಗಳೂರು-560100. ಉಚಿತ ಸಹಾಯವಾಣಿ: 1800 843 2001, ಮಿಂಚಂಚೆ: [email protected] (ಸ್ನಾತಕೋತ್ತರ ಕೋರ್ಸುಗಳಿಗೆ) ಮೂಲಕವೂ ಸಂಪರ್ಕಿಸಬಹುದು. (ಕೆ,ಕೆ,ಎಸ್.ಎಚ್)

Leave a Reply

comments

Related Articles

error: