ಸುದ್ದಿ ಸಂಕ್ಷಿಪ್ತ

ಸುತ್ತೂರು ಜಾತ್ರೆ : ಶೈಕ್ಷಣಿಕ ವಸ್ತು ಪ್ರದರ್ಶನ

ಮೈಸೂರು, ಜ.5 : ಶ್ರೀಕ್ಷೇತ್ರ ಸುತ್ತೂರಿನಲ್ಲಿ  ಜ.13ರಿಂದ 18ರವರೆಗೆ ನಡೆಯುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ್ಯ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಆಯೋಜಿಸಿದೆ.

ವಸ್ತು ಪ್ರದರ್ಶನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಪಠ್ಯಾಧಾರಿತ ವಿಷಯಗಳಿಗೆ ಸಂಬಂಧಿಸಿದಂತೆ ಗಣಿತ ವಿಜ್ಞಾನ, ಸಮಾಜ ವಿಜ್ಞಾನ ಇವುಗಳೊಂದಿಗೆ ಗ್ರಾಮೀಣಾಭಿವೃದ್ಧಿ, ಕೃಷಿ, ಕೌಶಲ ಭಾರತ, ಸ್ವಚ್ಚ ಭಾರತ್, ಆರೋಗ್ಯ ಮತ್ತು ನೈರ್ಮಲ್ಯ, ಡಿಜಿಟಲ್ ಇಂಡಿಯಾ, ಬೇಟಿ ಪಡಾವೋ ಬೇಟಿ ಬಚಾವೋ, ಆಹಾರ ಸಂರಕ್ಷಣೆ, ದೇಸಿ ಆಟಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶಿತಗೊಳ್ಳುವುದು. (ಕೆ.ಎಂ.ಆರ್ಪಿ)

Leave a Reply

comments

Related Articles

error: