
ಬಾಲಿವುಡ್ ಚುಂಬಕ ನಟಿ ಮಲ್ಲಿಕಾ ಶೆರಾವತ್ ಮೇಲೆ ಪ್ಯಾರಿಸ್ನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪ್ಯಾರಿಸ್ನ ಅಪಾರ್ಟ್ಮೆಂಟ್ನಲ್ಲಿ ಮುಸುಕುಧಾರಿ ಮೂವರು ಯುವಕರು ಆಗಮಿಸಿ ಮಲ್ಲಿಕಾ ಶೆರಾವತ್ ಮತ್ತು ಅಕೆಯ ಜೊತೆಗಿದ್ದ ಪುರುಷನ ಮೇಲೆ ಏಕಾಏಕಿ ಅಶ್ರುವಾಯು ಪ್ರಯೋಗಿಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಘಾಸಿಗೊಂಡಿರುವ ಅವರು ತಕ್ಷಣವೇ ತುರ್ತು ಸೇವೆ ಕರೆ ಮಾಡಿದ್ದಾರೆ. ಪೊಲೀಸರಿಂದ ಈ ಬಗ್ಗೆ ತನಿಖೆ ಆರಂಭಗೊಂಡಿದೆ.
ಮಲ್ಲಿಕಾ ಶೆರಾವತ್ ಮದುವೆ ವಿಷಯವಾಗಿ ಖಾಸಗಿ ವಾಹಿನಿಯಲ್ಲಿ “ಸ್ವಯಂವರ” ಎನ್ನುವ ರಿಯಾಲಿಟಿ ಶೋವನ್ನು ನಡೆಸಿ ಕೊನೆಯಲ್ಲಿ ಯಾರನ್ನು ಮದುವೆಯಾಗದೆ ಅದೊಂದು ಗಿಮಿಕ್ ಎಂದು ತೋರಿಸಿದ್ದರು.
ಖಂಡನೆ : ಬಾಲಿವುಡ್ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಹಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಅವರ ಮೇಲೆ ಹಲ್ಲೆ ನಡೆದಿದ್ದು, ಘಟನೆಗೆ ಹಿಂದಿ ಚಿತ್ರರಂಗದ ನಟ-ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರು ಖಂಡಿಸಿದ್ದಾರೆ. ವಿದೇಶದಲ್ಲಿರುವ ಬಾಲಿವುಡ್ ತಾರೆಯರಿಗೆ ಅಲ್ಲಿನ ಸರ್ಕಾರಗಳು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.