ಸುದ್ದಿ ಸಂಕ್ಷಿಪ್ತ

ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದ ಜಾಥಾ ಜ.7

ಮೈಸೂರು, ಜ.5 : ಗ್ರಾಹಕರ ಜಾಗೃತಿಗಾಗಿ ಕರ್ನಾಟಕ ಬ್ಯಾಂಕ್ ಮೈಸೂರು ವಲಯದಿಂದ ಜಾಥಾವನ್ನು ಜ.7ರಂದು ಬೆಳಗ್ಗೆ 7.30ರಿಂದ ಕುವೆಂಪುನಗರದಲ್ಲಿರುವ ಬ್ಯಾಂಕ್ ಕಚೇರಿಯಿಂದ ಆಯೋಜಿಸಿದೆ.

ಜಾಥಾವು ವಿಶ್ವಮಾನವ ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ, ಸರಸ್ವತಿಪುರಂ, ಆದಿಚುಂಚನಗಿರಿ ರಸ್ತೆ, ಜ್ಞಾನಗಂಗಾ ರಸ್ತೆ, ವಿಶ್ವಮಾನವ ರಸ್ತೆ ಮೂಲಕ ಸಾಗಿ ಮರಳಿ ಕಚೇರಿ ತಲುಪುವುದು. ಬ್ಯಾಂಕಿನ ಸಿಬ್ಬಂದಿ ಜಾಥದಲ್ಲಿ ಭಾಗಿಯಾಗುವರು ಎಂದು ಸಹಾಯಕ ಮಹಾಪ್ರಬಂಧಕ ತಿಳಿಸಿದ್ದಾರೆ. (ಕೆ.ಎಂ.ಆರ್ಪಿ)

Leave a Reply

comments

Related Articles

error: