ದೇಶಪ್ರಮುಖ ಸುದ್ದಿ

ಪ್ರಧಾನಿ ಮೋದಿ ಕ್ರಮವನ್ನು ಕೊಂಡಾಡಿದ ವಿದೇಶಿ ಪತ್ರಿಕೆಗಳು

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕೈಗೊಂಡಿರುವ ಹಳೆ ನೋಟುಗಳ ಅಮಾನ್ಯತೆಗೆ ವಿಶ್ವದ ಹಲವಾರು ರಾಷ್ಟ್ರಗಳು ಪ್ರಶಂಸೆ ವ್ಯಕ್ತಪಡಿಸಿವೆ ವಿದೇಶಿ ಪತ್ರಿಕೆಗಳಲ್ಲಿ ಈ ಬಗ್ಗೆ ಕೊಂಡಾಡಿವೆ.

ನ್ಯೂಯಾರ್ಕ್ ಟೈಮ್ಸ್ : ನೋಟು ಅಮಾನ್ಯಗೊಳಿಸುವುದು ಬಹುದೊಡ್ಡ ಪ್ರಯೋಗವಾಗಿದ್ದು ಮೋದಿ ಇದರಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬುದ್ಧಿವಂತಿಕೆಯನ್ನು ದೇಶವಾಸಿಗಳು ಪ್ರಶಂಸಿಸಿ ಸಂತೋಷವಾಗಿ ಸ್ವೀಕರಿಸಿದ್ದಾರೆ.

ದಿ.ಇಂಡಿಪೆಂಡೆಂಟ್ : ಸಿಂಗಾಪುರ್ ಮೂಲದ ದಿ.ಇಂಡಿಪೆಂಡೆಂಟ್ ಪತ್ರಿಕೆಯು ಭಾರತದ ಪ್ರಧಾನ ಮಂತ್ರಿಯವರ ನಿರ್ಧಾರ ಅವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೋದಿ ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯು ಇದ್ದಂತೆ ಎಂದು ಪ್ರತಿಕ್ರಿಯಿಸಿದೆ.

indexಫೋರ್ಬ್ಸ್ : ಜನರು ದೈನಂದಿನ ಜೀವನದಲ್ಲಿ ಗೊಂದಲದಲ್ಲಿದ್ದರೂ ಮೋದಿಯವರ ಕ್ರಮವನ್ನು ಒಪ್ಪಿಕೊಂಡಿದ್ದಾರೆ. ಇದೊಂದು ಶ್ರೇಷ್ಠ ಹಾಗೂ ಬುದ್ಧಿವಂತಿಕೆ ಕ್ರಮವಾಗಿದೆ ಎಂದು ನಿಯತಕಾಲಿಕ ಫೋರ್ಬ್ಸ್ ಮೋದಿ ಕ್ರಮವನ್ನು ಕೊಂಡಾಡಿದೆ.

ವಾಷಿಂಗ್ಟನ್ ಪೋಸ್ಟ್ : ಅಮೆರಿಕಾದ ಪ್ರಮುಖ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಭಾರತದಲ್ಲೀಗ ಚುನಾವಣಾ ಸಮಯ ಈ ಸಮಯದಲ್ಲಿ ನೋಟು ನಿಷೇಧ ಅಭಿವೃದ್ಧಿಯ ಹೆಬ್ಬಯಕೆ ಎಂದು ತಿಳಿಸಿದೆ.

ಬ್ಲೂಂಬರ್ಗ್ : ಅಮೆರಿಕ ಫೈನಾನ್ಸಿಯಲ್ ಜರ್ನಲ್ ಬ್ಲೂಂಬರ್ಗ್ ತನ್ನ ಪತ್ರಿಕೆಯಲ್ಲಿ ಮೋದಿಯ ಕ್ರಮವನ್ನು ಮೆಚ್ಚಿ ಆರ್ಥಿಕ ಸಂಕಷ್ಟದಲ್ಲಿರುವ ಅಸ್ಟೇಲಿಯವೂ ಭಾರತದ ಮೋದಿಯವರಂತೆ ಕ್ರಮ ಕೈಗೊಂಡು ದೊಡ್ಡ ನೋಟುಗಳನ್ನು ನಿಷೇಧಿಸಿದರೆ ಆಗ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದಿದೆ.

ವಿಶ್ವದ ಹಲವಾರು ರಾಷ್ಟ್ರಗಳು ಭಾರತ ಪ್ರಧಾನಿಯ ದಿಟ್ಟ ಕ್ರಮವನ್ನು ಶ‍್ಲಾಘಿಸಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಾತ್ರ ಪ್ರಸ್ತುತ ನಡೆಯುತ್ತಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸದೆ ಕಲಾಪಕ್ಕೆ ಅಡ್ಡಿಪಡಿಸುತ್ತ ಕೇವಲ ನೋಟಿನ ಬದಲಾವಣೆ ಬಗ್ಗೆ ಮೋದಿ ವಿರುದ್ಧ ಧರಣಿ ನಡೆಸಿ ಕೋಲಾಹಲ ಸೃಷ್ಟಿಸುತ್ತಿವೆ.

Leave a Reply

comments

Related Articles

error: