ಸುದ್ದಿ ಸಂಕ್ಷಿಪ್ತ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣ

ಮೈಸೂರು, ಜ.6:- ಭಾರತ ಚುನಾವಣಾ ಆಯೋಗದ ಆದೇಶದನ್ವಯ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ 216-ಕೃಷ್ಣರಾಜ, 217-ಚಾಮರಾಜ ಮತ್ತು 218-ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ದಿನಾಂಕ:ಜ.1ನ್ನು ಅರ್ಹತಾ ದಿನಾಂಕವನ್ನಾಗಿರಿಸಿಕೊಂಡು ನ.30 ರಿಂದ ಜ.12 ರವರೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಜ.1ರಿಂದ ಜ.12 ರವರೆಗೆ ವಿಶೇಷ ಆಂದೋಲನವಾಗಿ   ಬೆಳಿಗ್ಗೆ10 ಗಂಟೆಯಿಂದ ಸಂಜೆ 5-30 ರವರೆಗೆ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಆಯಾ ಮತಗಟ್ಟೆಗಳಲ್ಲಿ (ಮತದಾನಕೇಂದ್ರ) ಮತದಾರರಪಟ್ಟಿ ಸೇರ್ಪಡೆಗೆ ಅರ್ಜಿ ಸ್ವೀಕರಿಸುವ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಿದ್ದು ಕಾರ್ಯಕ್ರಮವನ್ನು ಮುಂದುವರೆಸಲಾಗಿದೆ. ಮೊದಲಬಾರಿ ಮತದಾರರಪಟ್ಟಿಗೆ ಹೆಸರು ಸೇರ್ಪಡೆ ಮಾಡುವಾಗ ಜ.1ಕ್ಕೆ  18 ವರ್ಷ ತುಂಬಿದವರು ಮಾತ್ರ ಅರ್ಜಿ ಸಲ್ಲಿಸಬೇಕು. (18 ರಿಂದ 22 ವರ್ಷದೊಳಗಿನ ವಯಸ್ಸಿನವರು ವಯಸ್ಸಿನ ಬಗ್ಗೆ ಪ್ರಮಾಣಪತ್ರ) ವಯಸ್ಸಿನ ಬಗ್ಗೆ ಜನನ ಪ್ರಮಾಣ ದೃಢಿಕರಣ ಪತ್ರ/ ಶಾಲಾ ದೃಢೀಕೃತ ದಾಖಲೆ ಪ್ರತಿ ಕಡ್ಡಾಯವಾಗಿರುತ್ತದೆ. ಉಳಿದ ಸಂದರ್ಭಗಳಲ್ಲಿ ಅರ್ಜಿದಾರರ ಕುಟುಂಬದವರ ಹೆಸರು ಸಂಬಂಧಿಸಿದ ಮತದಾರರಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ ಎಂದು ಪರಿಶೀಲಿಸಿ ಸೇರ್ಪಡೆ ಮಾಡಿಸಬಹುದಾಗಿದೆ.
ಅರ್ಜಿದಾರರು ಮತದಾರರಪಟ್ಟಿಗೆ ಹೆಸರು ಸೇರ್ಪಡೆ ಅರ್ಜಿ ನೀಡುವಾಗ ಪಾಸ್‍ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿ ಅರ್ಜಿಯಲ್ಲಿ ಅಂಟಿಸಿರಬೇಕು, ನಮೂನೆ-6ರ ಅರ್ಜಿಯ ಭಾಗ-3ರಲ್ಲಿ ಕಡ್ಡಾಯವಾಗಿ ಅರ್ಜಿದಾರರ ಕುಟುಂಬದವರ ಮತದಾರರಪಟ್ಟಿಯ ಭಾಗದ ಸಂಖ್ಯೆ ಮತ್ತು ಕ್ರಮಸಂಖ್ಯೆಯನ್ನು ನಮೂದಿಸಬೇಕು. ನಮೂನೆ-6 ರ ಅರ್ಜಿಯ ಭಾಗ-4 ರಲ್ಲಿ ಕಡ್ಡಾಯವಾಗಿ ಅರ್ಜಿದಾರರು ಹಿಂದಿನ ವಿಳಾಸವನ್ನು ನಮೂದಿಸಿರಬೇಕು. ಹಾಗೂ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿಮಾಡಬೇಕು. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈಬಿಡುವುದು ನಮೂನೆ-7ರಲ್ಲಿ,  ಮತದಾರರಪಟ್ಟಿಯಲ್ಲಿ ಹೆಸರು ಹಾಗೂ ಇತರೆ ವಿವರಗಳು ತಪ್ಪಾಗಿದ್ದರೆ ತಿದ್ದುಪಡಿಗೆ ನಮೂನೆ-8 ಹಾಗೂ ಒಂದೇ ಕ್ಷೇತ್ರದಲ್ಲಿ ವಿಳಾಸ ಬದಲಾವಣೆ ಆಗಿದ್ದಲ್ಲಿ ಅಂತಹವರು ನಿಗದಿತ ನಮೂನೆ 8ಎ ಅರ್ಜಿಗಳ ಜೊತೆ ಸೂಕ್ತ ದಾಖಲೆಗಳೊಂದಿಗೆ ಮೇಲ್ಕಂಡ ಅವಧಿಯಲ್ಲಿ ಅರ್ಜಿಗಳನ್ನು ಆಯಾ ಮತಗಟ್ಟೆಗಳಲ್ಲಿ ನಿರ್ಧಿಷ್ಟಪಡಿಸಿದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಬೇರೆ ವಿಧಾನಸಭಾ ಕ್ಷೇತ್ರದಿಂದ ಬಂದ ಮತದಾರರಿಗೆ ಹಿಂದಿನ ವಿಧಾನಸಭಾ ಕ್ಷೇತ್ರದ ಮತದಾರರಪಟ್ಟಿಯಿಂದ ಹೆಸರು ಕೈಬಿಟ್ಟ ಬಗ್ಗೆ ನಮೂನೆ 7ರಲ್ಲಿ ದೃಢೀಕರಣ (ಡಿಲೀಷನ್ ಸರ್ಟಿಫಿಕೇಟ್) ದೊಂದಿಗೆ ಈಗಿನ ವಿಳಾಸದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅ.24-2017 ರಿಂದ ಡಿ.29-2017 ರ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಮೈಸೂರು ಮಹಾನಗರಪಾಲಿಕೆ, ಚುನಾವಣಾ ಶಾಖೆಯನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: