ಮೈಸೂರು

ಜ.7-10ರ ವರೆಗೆ ಆರ್.ಎಂ.ಎಸ್,ಎಂಎಂಎಸ್ ನ ರಾಜ್ಯಮಟ್ಟದ ಸಮ್ಮೇಳನ

ಮೈಸೂರು, ಜ.6 : ಅಂಚೆ ಇಲಾಖೆಯ ಆಲ್‍ ಇಂಡಿಯಾ ರೈಲ್ವೆ ಮೇಲ್ ಸರ್ವೀಸ್ (RMS) ಮತ್ತು ಮೇಲ್‍ ಗಾರ್ಡ್ಸ್ ಆ್ಯಂಡ್ ಮಲ್ಟಿಟಾಸ್ಕಿಂಗ್‍ ಸ್ಟಾಫ್‍ (MMS) ಎಂ.ಜಿ., ಎಂ.ಟಿ.ಎಸ್ ಸಂಘಟನೆಯ  35ನೇ ರಾಷ್ಟ್ರಮಟ್ಟದ ಸಮ್ಮೇಳನವು ಜ.7ರಿಂದ 9ರವರೆಗೆ ನಗರದ ಶ್ರೀರಾಮಸೇವಾ ಅರಸು ಮಂಡಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ನವದೆಹಲಿಯ ಎ.ಐ.ಟಿ.ಯು.ಸಿ.ನ ಅಖಿಲ ಭಾರತೀಯ ಉಪಾಧ್ಯಕ್ಷ ಟಿ.ನರಸಿಂಹನ್ ಸಮ್ಮೇಳನಕ್ಕೆ ಜ.7ರ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡುವರು. ಎನ್.ಆರ್.ಮಾಳವಿಯ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ನವದೆಹಲಿಯ ಪೋಸ್ಟಲ್ ಸರ್ವಿಸ್ ಬೋರ್ಡ್ ಅಧ್ಯಕ್ಷ ಅನಂತನಾರಾಯಣ ನಂದ,  ಎ.ಐ ಪಿಇಯು ಗ್ರಾಪ್ ನ ಜನರಲ್ ಸೆಕ್ರೆಟರಿ ಆರ್.ಎನ್.ಪರಾಶರ್, ಮಾಜಿ ಜನರಲ್ ಸೆಕ್ರೆಟರಿ ಸಿ.ಸಿ.ಪಿಳ್ಳೈ ಮೊದಲಾದ ಗಣ್ಯರು ಭಾಗಿಯಾಗುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎ.ಶ್ರೀನಿವಾಸ ತಿಳಿಸಿದರು.

ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ನವದೆಹಲಿಯ ಆರ್‍ಐಐಐ ಜನರಲ್ ಸೆಕ್ರೆಟರಿ ಗಿರಿರಾಜ್ ಸಿಂಗ್, ಆರ್.ಐ ವಿ ಜನರಲ್ ಸೆಕ್ರೆಟರಿ ಪಿ.ಸುರೇಶ್. ಮಾಜಿ ಉಪಾಧ್ಯಕ್ಷ ಪಿ.ಕಮಲೇಶನ್ ಮೊದಲಾದವರು ಉಪನ್ಯಾಸ ನೀಡುವರು.

ಮೂರು ದಿನಗಳ ಕಾಲ ನಡೆಯುವ ಪ್ರತಿನಿಧಿಗಳ ಸಭೆಯಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಹೊಸ ಪಿಂಚಣಿ ಯೋಜನೆ ವಿರುದ್ಧ, 7ನೇ ವೇತನ ಆಯೋಗದ ನ್ಯೂನ್ಯತೆಗಳು ಸೇರಿದಂತೆ ಇಲಾಖೆಯಲ್ಲಿರುವ ಹಲವಾರು ಗಂಭೀರ ಸಮಸ್ಯೆಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜ.8ರಂದು ಬೆಳಗ್ಗೆ 9.30 ರಿಂದ ಅರಸು ಮಂಡಳಿಯಿಂದ ಆರ್.ಟಿ.ಓ ಸರ್ಕಲ್ ವರೆಗೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನವದೆಹಲಿಯ ಪ್ರಧಾನ ಕಾರ್ಯದರ್ಶಿ ಪಿ.ಸುರೇಶ್, ವಲಯ ಅಧ್ಯಕ್ಷ ಪಿ.ವಿ.ಹರೀಶ್, ವಲಯ ಕಾರ್ಯದರ್ಶಿ ಚಿ.ಉದಯಶಂಕರ್ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್.ಪಿ)

Leave a Reply

comments

Related Articles

error: