ಪ್ರಮುಖ ಸುದ್ದಿಮೈಸೂರು

ಕೆರೆಗೆ ಕೋಟ್ಯಾಂತರರೂ. ಚಿನ್ನಾಭರಣ ಬಿಸಾಡಿದ ಖತರ್ನಾಕ್ ತಂದೆ-ಮಕ್ಕಳು ಪೊಲೀಸ್ ವಶಕ್ಕೆ

ಮೈಸೂರು,ಜ.6:- ಬೆಂಗಳೂರು ಮೂಲದ ಖತರ್ನಾಕ್ ತಂದೆ-ಮಕ್ಕಳು ಸೇರಿ ಕೋಟ್ಯಾಂತರ ರೂ.ಬೆಲೆಬಾಳುವ ಚಿನ್ನಾಭರಣ ಮತ್ತು ಲಕ್ಷಾಂತರ ರೂ.ಗಳನ್ನು ಕದ್ದು ತಂದು ಮೈಸೂರು- ನಂಜನಗೂಡು ರಸ್ತೆಯ ದಳವಾಯಿ ಕೆರೆಯಲ್ಲಿ ಬಿಸಾಡಿದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಮೂಲದ ಅಪ್ಪ-ಮಕ್ಕಳು ಚಿನ್ನಾಭರಣಗಳ ಮಳಿಗೆಯಲ್ಲಿ ಕಳ್ಳತನ ನಡೆಸಿ  ಕೋಟ್ಯಾಂತರ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಹಣವನ್ನು ತಿಂಗಳ ಹಿಂದೆ ತಂದು ಮೈಸೂರು- ನಂಜನಗೂಡು ರಸ್ತೆಯ ದಳವಾಯಿ ಕೆರೆಯಲ್ಲಿ ಬಿಸಾಡಿ ಹೋಗಿದ್ದರು.  ಕೆರೆಯಲ್ಲಿ ಕಳೆದ ಎರಡು ದಿನಗಳಿಂದ ಹುಡುಕಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಚಿನ್ನಾಭರಣ ಮತ್ತು ಹಣವನ್ನು ಬಾಕ್ಸ್ ನಲ್ಲಿ ತುಂಬಿ ಕೆರೆಯಲ್ಲಿ ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದು, ಪೊಲೀಸರು ನುರಿತ ಈಜುಗಾರರನ್ನು ಕರೆಯಿಸಿ ಬಾಕ್ಸ್ ನ್ನು ನೀರಿನಿಂದ ಮೇಲಕ್ಕೆ ತೆಗೆಸಿದ್ದಾರೆ.  ಇದೀಗ ತಂದೆ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಬೆಂಗಳೂರಿನಲ್ಲಿಯೇ ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: