ಮೈಸೂರು

ಹಿಂದೆ ಚಲಾವಣೆಯಲ್ಲಿದ್ದ ನಾಣ್ಯಗಳ ಬಗ್ಗೆ ಕುರಿತು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಅವಶ್ಯಕತೆ ಇದೆ : ರತ್ನಲಕ್ಷ್ಮಣ್

ಮೈಸೂರು, ಜ. 6:- ನಮ್ಮ ದೇಶದಲ್ಲಿ ಈ ಹಿಂದೆ ಚಲಾವಣೆಯಲ್ಲಿದ್ದ ನಾಣ್ಯಗಳ ಬಗ್ಗೆ ಕುರಿತು ಇಂದಿನ ಪೀಳಿಗೆಗೆ ತಿಳಿಸಿಕೊಡುವ  ಅವಶ್ಯಕತೆ ಇದೆ ಎಂದು ಉಪಮೇಯರ್ ರತ್ನಲಕ್ಷ್ಮಣ್ ಅಭಿಪ್ರಾಯಪಟ್ಟರು.

ಅವರು ಶನಿವಾರ  ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ದಕ್ಷಿಣ ಭಾರತದ ನಾಣ್ಯ ಶಾಸ್ತ್ರ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಇಲಾಖೆಯ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 28ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಿ ಚಿನ್ನ, ಬೆಳ್ಳಿ ತಾಮ್ರ ಹಾಗೂ ಹಿತ್ತಾಳೆ ನಾಣ್ಯಗಳು ಚಲಾವಣೆಯಲ್ಲಿದ್ದವು. ಪರಿಸ್ಥಿತಿ ಬದಲಾದಂತೆ ಇವುಗಳು ಕ್ರಮೇಣ ಚಲಾವಣೆಯಿಂದ ಹೊರಗುಳಿದು ಕಾಗದದ ನೋಟುಗಳು ಇದರ ಸ್ಥಾನವನ್ನು ಅಲಂಕರಿಸಿವೆ. ಎಷ್ಟೋ ಮಂದಿಗೆ ಈ ವಿಚಾರವೇ ತಿಳಿದಿಲ್ಲ. ಹಾಗಾಗಿ ಹಳೇ ನಾಣ್ಯಗಳು ಚಲಾವಣೆಯಲ್ಲಿದ್ದವು ಎಂಬುದರ ಬಗ್ಗೆ ಮಾಹಿತಿ ತಿಳಿಸಿ ಕೊಡುವ ಸಲುವಾಗಿ ಇಂದು ಆಯೋಜಿಸಿರುವ ಕಾರ್ಯಕ್ರಮ ಬಹಳ ಶ್ಲಾಘನೀಯವಾದುದು ಎಂದರು.

ಎ.ಎಸ್.ಐ.ನ ಜನರಲ್ ಸೆಕ್ರೆಟರಿ ನರಸಿಂಹ ಮೂರ್ತಿ ಮಾತನಾಡಿ ಪರಂಪರೆ ಇಲಾಖೆಯಲ್ಲಿ ಈ ಹಿಂದೆ ನಮ್ಮದೇಶದಲ್ಲಿ ಚಲಾವಣೆಯಲ್ಲಿದ್ದ ಚಿನ್ನ, ಬೆಳ್ಳಿ, ಹಿತ್ತಾಳೆ ಹಾಗೂ ತಾಮ್ರಮ ನಾಣ್ಯಗಳನ್ನು ಸಂರಕ್ಷಿಸಲಾಗಿದ್ದು ಆಸಕ್ತರು ಇಲ್ಲಿಗೆ ಭೇಟಿ ನೀಡಿ ಅವುಗಳನ್ನು ವೀಕ್ಷಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಎಂದರು.

ಸಮಾರಂಭದಲ್ಲಿ ಕೆ.ಎ.ಎಸ್. ಅಧಿಕಾರಿ ವೆಂಕಟೇಶ್ ಟಿ, ಪರಂಪರೆ ಇಲಾಖೆಯ ಅಧಿಕಾರಿ ಸಾಯಿಶರಣವನ್ ಸೇರಿದಂತೆ ಹಲವರು ಉಪಸ್ಥಿರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: