ಮೈಸೂರು

ಬಿ.ಐ.ಎಸ್/ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಖರೀದಿಸಲು ಜ.8ರ ವರೆಗೆ ಕಾಲಾವಕಾಶ ವಿಸ್ತರಣೆ

ಮೈಸೂರು,ಜ.6:- ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರ  ಸುರಕ್ಷತೆಗಾಗಿ ಬಿ.ಐ.ಎಸ್. / ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಮೈಸೂರು ನಗರ ಪೊಲೀಸರು ದಿನಾಂಕ: ಜ.2 ರಂದು ಆಪರೇಷನ್ ಸೇಫ್ ರೈಡ್ ಕಾರ್ಯಾಚರಣೆ ಕೈಗೊಂಡು ಕಳಪೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ/ಹಿಂಬದಿ ಸವಾರಿ ಮಾಡಿದವರಿಂದ ಒಟ್ಟು 15,501 ಕಳಪೆ ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡಿದ್ದು,  ಬಿ.ಐ.ಎಸ್. / ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್‍ಗಳನ್ನು ಖರೀದಿಸಿ  ಧರಿಸುವ ಬಗ್ಗೆ ಜ.5ರ ವರೆಗೆ ಸಾರ್ವಜನಿಕರಿಗೆ ಕಾಲಾವಕಾಶ ನೀಡಲಾಗಿತ್ತು.  ಜ.6 ರಿಂದ ಆಪರೇಷನ್ ಸೇಫ್ ರೈಡ್ ಕಾರ್ಯಾಚರಣೆ ಮುಂದುವರೆಸುವ ಬಗ್ಗೆ ತಿಳಿಸಲಾಗಿತ್ತು. ಆದರೆ ಸಾರ್ವಜನಿಕರು, ಕೈಗಾರಿಕೋದ್ಯಮಿಗಳು  ಹಾಗೂ ಇತರರು ಗುಣಮಟ್ಟದ ಹೆಲ್ಮೆಟ್‍ಗಳನ್ನು ಖರೀದಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಇದರ ಗಡುವನ್ನು ಜ.8 ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದ ನಂತರ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ  ಅಪರೇಷನ್ ಸೇಫ್ ರೈಡ್  ಕಾರ್ಯಾಚರಣೆಯನ್ನು ಪುನ: ಆರಂಭಿಸಲಾಗುವುದು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್, ತಿಳಿಸಿದ್ದಾರೆ.

ಏತನ್ಮಧ್ಯೆ ರಾಜ್ಯಾದ್ಯಂತ ಫೆ.1ರಿಂದ ಕಡ್ಡಾಯವಾಗಿರುವಾಗ ಮೈಸೂರಿಗೇ ಬೇರೆ ನಿಯಮ, ಮೈಸೂರು ಬೇರೆ ರಾಜ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ. ರೂಲ್ಸ್ ಎಲ್ಲ ಕಡೆಯೂ ಒಂದೇ ರೀತಿ ಇರುವಾಗ ಇಲ್ಲಿ ಜನವರಿ 8ರವರೆಗೆ ಮಾತ್ರ ಯಾಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಇಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: