ಸುದ್ದಿ ಸಂಕ್ಷಿಪ್ತ
ಜ.8 ರಿಂದ ಮುದ್ರಾಪ್ರಾಣಾಯಾಮ ಯೋಗ ಶಿಬಿರ
ಮೈಸೂರು, ಜ. 6 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ಹಾಗೂ ಮುದ್ರಾಪ್ರಾಣಾಯಾಮ ರಿಸರ್ಜ್ ಸೆಂಟರ್ ನಿಂದ ಜ.8 ರಿಂದ ಜೆ.ಎಲ್.ಬಿ. ರಸ್ತೆಯ ಮಹಿಳಾ ಸಮಾಜದಲ್ಲಿ 7 ದಿನಗಳ ಕಾಲ ಮುದ್ರಾ ಪ್ರಾಣಾಯಾಮ ಶಿಬಿರವನ್ನು ಆಯೋಜಿಸಿದೆ.
ಶಿಬಿರವು ಪ್ರತಿದಿನ ಬೆಳಗ್ಗೆ 6.30 ರಿಂದ 7.30ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಸಂಕಲ್ಪ ಸಿದ್ಧಿ ಧ್ಯಾನದ ಮೂಲಕ ಮಧುಮೇಹ, ರಕ್ತದೊತ್ತಡ, ಬೊಜ್ಜು, ಅಸ್ತಮ, ಅಲರ್ಜಿ, ಬೆನ್ನುನೋವು, ಅಸಿಡಿಟಿ ಮುಂತಾದ ಕಾಯಿಲೆಗಳನ್ನು ಮುದ್ರಾ ಪ್ರಾಣಾಯಾಮ ಹಾಗೂ ಸಂಕಲ್ಪ ಸಿದ್ಧಿ ಧ್ಯಾನ ಶಿಬಿರ ಮೂಲಕ ಪರಿಹರಿಸಲಾಗುವುದು. ಮಾಹಿತಿಗಾಗಿ ಮೊ.ನಂ. 9945614565, 9141096102 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್ ಪಿ)