
ಮೈಸೂರು
ಮೈಸೂರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಭಾಗಿ
ಮೈಸೂರು, ಜ.6 : 2018ರ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಗೆ ನಗರದ ಜೆಎಸ್ಎಸ್ ಸಂಸ್ಥೆಗಳು ಮೈಸೂರಿಗೆ ಬೆಂಬಲವಾಗಿದ್ದು, ಮಹಾವಿದ್ಯಾಪೀಠದ 37 ಸಂಸ್ಥೆಗಳಲ್ಲಿ 24468 ವಿದ್ಯಾರ್ಥಿಗಳು, 1889 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರೂ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಸಿಟಿಜನ್ ಪೀಡ್ ಬ್ಯಾಕ್ ನಲ್ಲಿ ಭಾಗಿಯಾಗಿದ್ದೇವೆ ಎಂದು ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ತಿಳಿಸಿದ್ದಾರೆ.
ಡಾ. ಸಿ.ಜಿ.ಬೆಟಸೂರುಮಠ ಅವರು, ಈ ಬಗ್ಗೆ ಸಭೆ ನಡೆಸಿ ಇದೇ ಜ.4 ರಿಂದ ಆರಂಭವಾಗಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗಿಯಾಗಲು ನಿರ್ದೇಶನ ನೀಡಲಾಗಿದ್ದು, ಟೋಲ್ ಫ್ರೀ ನಂ 1969ಕ್ಕೆ ಕರೆ ಮಾಡಿ 6 ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕೆಂದು ಮಾರ್ಗದರ್ಶನ ಮಾಡಲಾಗಿದೆ. ಇದರೊಂದಿಗೆ ವೆಬ್ ಸೈಟ್ ಮೂಲಕ ಸ್ವಚ್ಛತಾ ಆಪ್ ನಲ್ಲಿಯೂ ವಿದ್ಯಾರ್ಥಿಗಳು, ಪಾಲಕರು ಸ್ನೇಹಿತರನ್ನು ಸರ್ವೇಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಅವರು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆಂದೋಲನದಲ್ಲಿ ಭಾಗಿಯಾಗಲು ಕೋರಿದರು.
ಸಭೆಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕರು, ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಸೇರಿ ಒಟ್ಟು 37 ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. (ಕೆ.ಎಂ.ಆರ್ ಪಿ)