ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ ಹಾಗೂ ಗಣ್ಯರಿಗೆ ಸನ್ಮಾನ

ಕನ್ನಡ ರಾಜ್ಯೋತ್ಸವ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಮಹಾಪೌರ ಆರ್.ಲಿಂಗಪ್ಪ ನ.20 ಮತ್ತು 21ರಂದು ಆಯೋಜಿಸಿದ್ದಾರೆ

ಸರಸ್ವತಿಪುರಂನ ಕೆ.ಜವರೇಗೌಡ ಉದ್ಯಾನವನದಲ್ಲಿ ನ.20, ಸಂಜೆ 5:30ಕ್ಕೆ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಗೋವಿಂದಪ್ಪ ಉದ್ಘಾಟಿಸುವರು. ಮೈಸೂರು ವಿವಿಯ ನಿವೃತ್ತ ಅಧಿಕಾರಿ ಕೆ.ಟಿ.ವೀರಪ್ಪ ಅಧ್ಯಕ್ಷತೆ ವಹಿಸುವರು. ನಂತರ ಪ್ರೊ.ಕೃಷ್ಣೇಗೌಡ ಮತ್ತು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮವಿದೆ. ಬೆಳಿಗ್ಗೆ 8ಕ್ಕೆ ಮಕ್ಕಳಿಗಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ನ.21ರಂದು ಸಂಜೆ 6:30ಕ್ಕೆ  ಶ್ರೀಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಂಪಾದಕ ರಾಜಶೇಖರ ಕೋಟಿ ಅಧ್ಯಕ್ಷತೆ ವಹಿಸುವರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರ, ಹಿರಿಯ ವಿಜ್ಞಾನಿ ಪ್ರೊ.ಜಿ.ಆರ್.ಲಕ್ಷ್ಮಣ್ ರಾವ್, ಡಾ.ಪುಟ್ಟಬಸಪ್ಪ ಹಾಗೂ ಮೈಸೂರಿಗೆ ಸ್ವಚ್ಚ ನಗರ ಪ್ರಶಸ್ತಿ ಬರಲು ಕಾರಣರಾದ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಗುವುದು.

ಜಾದು ಕಲಾವಿದೆ ಸುಮ ರಾಜ್‍ಕುಮಾರ್ ಅವರಿಂದ ಮಾತನಾಡುವ ಗೊಂಬೆ ಮ್ಯಾಜಿಕ್ ಶೋ ಇದೆ.

Leave a Reply

comments

Related Articles

error: