ಮೈಸೂರು

ಎಸ್ಎಂಐಎಂಡಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಸಮ್ಮೇಳನಕ್ಕೆ ಚಾಲನೆ

ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆ ಆಯೋಜಿಸಿರುವ “ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ” ವಿಷಯ ಕುರಿತ ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಸಮ್ಮೇಳನಕ್ಕೆ ಇಂದು (ನ.18) ಚಾಲನೆ ನೀಡಲಾಯಿತು.

ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದ ಡಾ. ಕಲಿಯಪ್ಪ ಕಾಲಿರಾಜನ್ ಅವರು, ಅರ್ಥಶಾಸ್ತ್ರ ಪ್ರಾಧ್ಯಾಪಕರು, ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಕ್ಯಾನ್ಬೆರ್ರ ಅವರು ಮಾತನಾಡುತ್ತ ‘ಅಭಿವೃದ್ಧಿಶೀಲ ದೇಶಗಳು ಬೆಳವಣಿಗೆ ಸಾಧಿಸಬೇಕಾದರೆ ‘ಇಂಟೆಂಡೆಡ್ ನ್ಯಾಷನಲಿ ಡಿಟರ್ಮಿನ್ಡ್ ಕಾಂಟ್ರಿಬ್ಯುಶನ್ಸ್ (INDC) ಮತ್ತು ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟ್ನರ್ಷಿಪ್ಸ್ (RCEP) ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ಸಹಕಾರವನ್ನು ಉಳಿಸಿಕೊಳ್ಳಬೇಕು. ತಾಂತ್ರಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು ಹಾಗೂ ಅನೇಕ ರೀತಿಯ ಸುಂಕನೀತಿಗಳನ್ನು ಕಡಿಮೆ ಮಾಡಿಕೊಳ್ಳುವುದರ ಮೂಲಕ ಎಲ್ಲ ದೇಶಗಳ ಬೆಳವಣಿಗೆಗೆ ಮೇಲಿನ ಕಾರ್ಯಕ್ರಮಗಳು ಒತ್ತು ನೀಡುತ್ತವೆ’ ಎಂದರು. ರಾಜಕೀಯ ತೊಂದರೆಗಳು ಇರುವ ಸದ್ಯದ ಪರಿಸ್ಥಿತಿಯಲ್ಲಿ ಈ ಸಾಧನೆ ಕಷ್ಟವೆನಿಸಿದರೂ, ಆರ್ಥಿಕ ಅಭಿವೃದ್ಧಿಯನ್ನು ಗಳಿಸಲು ಸಾಧ್ಯವೆಂದು, ಚೀನಾ ಮತ್ತು ಜಪಾನ್ ದೇಶಗಳ ಉದಾಹರಣೆಯನ್ನು ನೀಡಿದರು. ಡಾ. ಕಲಿಯಪ್ಪ ಅವರು ಭಾರತ ಸರ್ಕಾರದ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಎಸ್ಡಿಎಂಐಎಂಡಿ ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು ಸಮ್ಮೇಳನಕ್ಕೆ ಆಗಮಿಸಿರುವವರನ್ನು ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಅವರು ಇಂದಿನ ಅಸ್ಥಿರ ಆರ್ಥಿಕ ವ್ಯವಸ್ಥೆಯನ್ನು  ಸುಸ್ಥಿರಗೊಳಿಸುವಲ್ಲಿ ಆರ್ಥಿಕ ತಜ್ಞರು ಹಾಗೂ ಸಂಶೋಧಕರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಡಾ. ಬಿ.ವೆಂಕಟ್‍ರಾಜ, ಸಮ್ಮೇಳನದ ಮುಖ್ಯಸ್ಥರು, ಸಮ್ಮೇಳನದ ಪ್ರಮುಖ ವಿಷಯವನ್ನು ಪರಿಚಯಿಸಿದರು ಹಾಗೂ ವಂದಿಸಿದರು. ತಮ್ಮ ಭಾಷಣದಲ್ಲಿ ಅವರು ಅಸಮತೋಲನ ಬೆಳವಣಿಗೆ, ಉದ್ಯೋಗರಹಿತ ಬೆಳವಣಿಗೆ, ಹಾಗೂ ಹವಾಮಾನ ಬದಲಾವಣೆ – ಮುಂತಾದ ವಿಷಯಗಳಿಂದ ಅಭಿವೃದ್ಧಿಗೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಭಾರತ ದೇಶದ ಜೊತೆಗೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೈಜೀರಿಯಾ, ಬಾಂಗ್ಲಾದೇಶ್, ನೇಪಾಳ, ಫಿಜಿ, ಇರಾನ್ ಹಾಗೂ ಇತರ ದೇಶಗಳಿಂದ ಶಿಕ್ಷಣ  ಕ್ಷೇತ್ರದವರು, ಉದ್ಯಮ ಬಳಗದವರು, ಸಂಶೋಧನಾ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ ವಿಷಯಗಳನ್ನು ಕುರಿತ  180 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಈ ಎರಡುದಿನಗಳ ಅವಧಿಯಲ್ಲಿ ಪ್ರಸ್ತುತಗೊಳ್ಳಲಿವೆ.

Leave a Reply

comments

Related Articles

error: