ಕರ್ನಾಟಕ

ಬೈಕ್ ರೇಸಿಂಗ್ ಹುಚ್ಚಿಗೆ ಬಾಲಕಿ ಬಲಿ

ಚಿಕ್ಕಬಳ್ಳಾಪುರ,ಜ.08: ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ ಬಾಲಕಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಅವರವತಿ ಬಳಿ ನಡೆದಿದೆ.

ಬುಳ್ಳಹಳ್ಳಿಯ ವೇಣುಗೋಪಾಲ್ ಅವರ ಮಗಳು ಅಂಜು ಮೃತ ಬಾಲಕಿ. ಬೆಂಗಳೂರು ಮೂಲದ ನಿಕಿತ್ ಸ್ನೇಹಿತರೊಂದಿಗೆ ಬೈಕ್ ರೇಸಿಂಗ್ ಮಾಡುತ್ತಾ ಕೋಲಾರದ ಅಂತರಗಂಗೆಗೆ ತೆರಳುವಾಗ ಅಂಜು ಅವತಿಯಿಂದ ಕುಡಿಯುವ ನೀರು ತೆಗೆದುಕೊಂಡು ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.

ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಥಳಿಸಿದ್ದಾರೆ. ಇನ್ನು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. (ವರದಿ:ಪಿ.ಎಸ್)

Leave a Reply

comments

Related Articles

error: