ದೇಶಮನರಂಜನೆ

‘ಹಂಟರ್ ವಾಲಿ’ ಜನ್ಮದಿನದ ಪ್ರಯುಕ್ತ ಡೂಡಲ್ ಸಮರ್ಪಿಸಿದ ಗೂಗಲ್

ದೇಶ(ನವದೆಹಲಿ)ಜ.8:- ಚಿತ್ರನಟಿ, ಸ್ಟಂಟ್ ವುಮನ್ ಆಗಿದ್ದ ಫಿಯರ್ಲೆಸ್ ನಾದಿಯಾ ಅವರ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಸಮರ್ಪಿಸಿದೆ.

ಆಸ್ಟ್ರೇಲಿಯಾ ಮೂಲದ ಈ ಮಹಿಳೆ ತನ್ನ ಐದನೇ ವಯಸ್ಸಿನಲ್ಲಿಯೇ ಭಾರತಕ್ಕೆ ಬಂದಿದ್ದರು. ಹಿಂದಿಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿ ಆ್ಯಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಂಡರು.   1935ರಲ್ಲಿ ತೆರೆಕಂಡ ‘ಹಂಟರ್ ವಾಲಿ’ ಚಿತ್ರದ ಮೂಲಕ ‘ಹಂಟರ್ ವಾಲಿ’ ಎಂದೇ ಖ್ಯಾತರಾದರು. ಜನವರಿ 8.1908ರಲ್ಲಿ ಆಸ್ಟ್ರೇಲಿಯಾದಲ್ಲಿ ಜನಿಸಿದ ಅವರ ಮೂಲ ಹೆಸರು ಮೇರಿ ಎನ್ ಇವಾನ್ಸ್. ಇವರು ತನ್ನ ಐದನೇ ವರ್ಷಕ್ಕೆ ಭಾರತಕ್ಕೆ ಆಗಮಿಸಿದ್ದರು. ಇಲ್ಲಿ ಕುದುರೆ ಸವಾರಿ, ಶಿಕಾರಿ ನಡೆಸುವುದನ್ನು ಕಲಿತರು. ದೇಶ್ ದೀಪಕ್, ನೂರ್ ಎ ಯಮನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ನೀಲಿಕಣ್ಣಿನ ಆಕರ್ಷಕ ಬಂಗಾರದ ಮೈಮಾಟ, ಬ್ಲಾಂಡ್ ಚೆಲುವೆಯ ನಟನ ಕೌಶಲ್ಯಕ್ಕೆ ಮುಂಬೈನ ಚಿತ್ರ ರಸಿಕರು ಮಾರು ಹೋಗಿದ್ದರು. ಕುದುರೆಗಳನ್ನು ಸಾಕುವುದರಲ್ಲಿ ಇವರಿಗೆ ಆಸಕ್ತಿ ಹೆಚ್ಚಿತ್ತು.  ಅವರ 110ನೇ ಜನ್ಮದಿನದ ಸವಿನೆನಪಿಗಾಗಿ ಗೂಗಲ್ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ. 1996ರ ಜನವರಿ 9ರಂದು ಇಹಲೋಕ ತ್ಯಜಿಸಿದರು.(ಎಸ್.ಎಚ್)

Leave a Reply

comments

Related Articles

error: