
ಮೈಸೂರು
ಪ್ರೇಕ್ಷಕರ ಮನಸೂರೆಗೊಂಡ ಕನಕದಾಸರ ಕೀರ್ತನೆಗಳು
ಜಗನ್ಮೋಹನ ಅರಮನೆಯಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ‘ಕನಕ ನುಡಿ ನಮನ ವ್ಯಾಸ ದಾಸ ಝೇಂಕಾರ’ ಕನಕದಾಸರ ಕೀರ್ತನೆಗಳ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಮತ್ತು ಶಂಕರ ಶಾನುಭೋಗ್ ಅವರ ಧ್ವನಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಕನಕದಾಸರ ಕೀರ್ತನೆಗಳು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು.
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ, ಕೂಗಿದರೂ ದನಿ ಕೇಳಲಿಲ್ಲವೇನು.. ನರಹರಿಯೇ.. ಬಾಗಿಲನು ತೆರೆದು… ಇಂತಹ ಇಂಪಾದ ಕೀರ್ತನೆಗಳನ್ನು ಕೇಳುತ್ತಾ ಪ್ರೇಕ್ಷಕರು ತಲೆದೂಗುತ್ತಿದ್ದರು.
ಪಂಡಿತ ಬೇ.ನಾ.ವಿಜಯೀಂದ್ರಾ ಚಾರ್ಯ ಅವರು ಕೀರ್ತನೆಗಳ ವ್ಯಾಖ್ಯಾನವನ್ನು ಮಾಡುವ ಮೂಲಕ ಪ್ರೇಕ್ಷಕರಿಗೆ ಕೀರ್ತನೆಗಳ ಅರ್ಥ ಮತ್ತು ಸಾರವನ್ನು ತಿಳಿಸುತ್ತಿದ್ದರು. ಶಂಕರ್ ಶಾನುಭೋಗ್ ಅವರು ನಳಚರಿತ್ರೆಯ ಕೆಲವು ಸಾಲುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕೀಬೋರ್ಡ್ ನಲ್ಲಿ ಗಣೇಶ್ ಭಟ್, ತಬಲ ರಘು, ಕೊಳಲು ಶಿವಲಿಂಗು, ರಿದಂ ಪ್ಯಾಡ್ ನಲ್ಲಿ ಗುರುದತ್ತ ಅವರು ಸಹಕಾರ ನೀಡಿದರು.