ಮೈಸೂರು

ಎನ್‍ಐಇಯಲ್ಲಿ ಆಟೋಮೋಟಿವ್ ಟೆಕ್ನಾಲಜಿ ಉತ್ಸವಕ್ಕೆ ಚಾಲನೆ

ಮೈಸೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್(ಎನ್‍ಐಇ)ನ ಡೈಮಂಡ್ ಜುಬಿಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ಆಯೋಜಿಸಿರುವ ಎರಡು ದಿನಗಳ ಆಟೋಮೋಟಿವ್ ಟೆಕ್ನಾಲಜಿ ಉತ್ಸವಕ್ಕೆ ಶುಕ್ರವಾರದಂದು ಚಾಲನೆ ದೊರೆಯಿತು.

ಎನ್‍ಐಇ, ಎನ್‍ಐಇ- ಈಚರ್ ಸೆಂಟರ್ ಫಾರ್ ಆಟೋಮೊಬೈಲ್ ಟೆಕ್ನಾಲಜಿ ಹಾಗೂ ಎಸ್‍ಎಇಐಎನ್‍ಡಿಐಎ ಕಾಲೇಜಿಯೇಟ್ ಕ್ಲಬ್ ಆಫ್ ಎನ್‍ಐಇ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಉತ್ಸವವನ್ನು ಡೆಲ್ಫಿ ಟೆಕ್ನಿಕಲ್ ಸೆಂಟರ್ ಇಂಡಿಯಾದ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಉದ್ಘಾಟಿಸಿದರು.

ಹೊಸ ತಂತ್ರಜ್ಞಾನಗಳು ಹಾಗೂ ಆಟೋಮೋಟಿವ್ ಇಂಜಿನಿಯರಿಂಗ್ ವಿಷಯ ಕುರಿತ ತಾಂತ್ರಿಕ ಗೋಷ್ಠಿಗಳನ್ನು ಇದೇ ವೇಳೆ ಆಯೋಜನೆ ಮಾಡಲಾಗಿದ್ದು, ಡೆಲ್ಫಿ ಆಟೋಮೋಟಿವ್ ಸಿಸ್ಟಮ್ಸ್, ಜೆಕೆ ಟೈರ್ಸ್, ಐಷರ್ ಮೋಟಾರ್ಸ್ ಕಂಪನಿಗಳ ತಜ್ಞ ಇಂಜಿನಿಯರ್‍ಗಳು ಉಪನ್ಯಾಸ ನೀಡಿದರು.

ಎನ್ಐಇ ವ್ಯವಸ್ಥಾಪನ ಸಮಿತಿ ಖಜಾಂಚಿ ಟಿ.ಕೆ. ಚಿತ್ತರಂಜನ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ನ್ಯೂಸ್ ಲೆಟರ್ ಅನ್ನು ಬಿಡುಗಡೆ ಮಾಡಿದರು. ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಉಪಾಧ್ಯಕ್ಷ ಯು.ಕೆ. ಶೆಣೈ, ರಾಣಿ ಮದ್ರಾಸ್‍ನ ಜನರಲ್ ಮ್ಯಾನೇಜರ್ ಕೃಷ್ಣ ಕುಮಾರ್, ಎನ್‍ಐಇ ಮ್ಯಾನೇಜಿಂಗ್ ಕಮಿಟಿ ಡೈರೆಕ್ಟರ್ ಎಸ್.ಎಲ್. ರಾಮಚಂದ್ರ, ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ವಿ. ಅಚ್ಯುತ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: