ಸುದ್ದಿ ಸಂಕ್ಷಿಪ್ತ

ಕಳ್ಳತನ ವಿಫಲ ಯತ್ನ ಕಳ್ಳರ ಬಂಧನ

ಮೈಸೂರಿನಲ್ಲಿ ಮನೆಗಳ ಕಳುವು ಮಾಡುತ್ತಿದ್ದ ಕಳ್ಳರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಪೊಲೀಸ್ ಬಡಾವಣೆ ಮೂರನೇ ಹಂತದ ಕೆ.ಆರ್.ಶ್ರೀನಿವಾಸನ್ ನಗರದ ಬಿ.ಎಂ.ಮೂರ್ತಿ ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಮನೆಯವರು ಎಚ್ಚರಗೊಂಡು ಗಲಾಟೆ ಮಾಡಿದ್ದರಿಂದ ಕಳ್ಳರು ಸ್ಥಳದಲ್ಲಿ ತಮ್ಮ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ಬೈಕ್ ನಂಬರ್ ದಾರಿ ಹಿಡಿದು ತನಿಖೆ ಕೈಗೊಂಡ ಪೊಲೀಸರು ಪೇಯಿಂಟ್ ಕೆಲಸ ಮಾಡಿಕೊಂಡಿದ್ದ ಗೌಸಿಯಾನಗರದ ಕಾಕಾ ಮಸೀದಿಯ  ಮೊಹಮ್ಮದ್ ಮುನ್ನಾಹಾಗೂ ರಾಜೇಂದ್ರ ನಗರದ ಬಟ್ಟೆ ವ್ಯಾಪಾರಿ ರಿಜ್ವಾನ್ ಖಾನ್ ಇವರುಗಳನ್ನು ಬಂಧಿಸಲಾಗಿದ್ದು.  ಬಂಧಿತರಿಂದ 3ಲಕ್ಷ ಮೌಲ್ಯದ 93 ಗ್ರಾಮ್ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

Leave a Reply

comments

Related Articles

error: