ಪ್ರಮುಖ ಸುದ್ದಿಮೈಸೂರು

ಇಂದು ಖಾತೆದಾರರಿಗೆ ಮಾತ್ರ ನೋಟು ವಿನಿಮಯ, ಹಿರಿಯ ನಾಗರಿಕರಿಗೆ ವಿನಾಯಿತಿ

ಬ್ಯಾಂಕ್‍ಗಳು ಶನಿವಾರದಂದು ತಮ್ಮ ಖಾತೆದಾರರಿಗೆ ಮಾತ್ರ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಡಲಿದ್ದು, ಹಿರಿಯ ನಾಗರಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅವರು ಯಾವ ಬ್ಯಾಂಕಲ್ಲಿ ಬೇಕಾದರೂ ಹಣ ವಿನಿಮಯ ಮಾಡಿಕೊಳ್ಳಬಹುದು.

ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಅಧ್ಯಕ್ಷ ರಾಜೀವ್ ರಿಷಿ ಈ ಬಗ್ಗೆ ಹೇಳಿಕೆ ನೀಡಿ, ಕಳೆದೊಂದು ವಾರದಿಂದ ಖಾತೆ ಹೊಂದಿಲ್ಲದವರಿಗೂ ನೋಟು ವಿನಿಮಯ ಸೇವೆ ನೀಡಿದ್ದೇವೆ. ಈ ಅವಧಿಯಲ್ಲಿ ನಮ್ಮ ಗ್ರಾಹಕರು ತೊಂದರೆಪಟ್ಟಿದ್ದಾರೆ. ಹೀಗಾಗಿ ಶನಿವಾರ ಖಾತೆದಾರರಿಗೆ ಮಾತ್ರವೇ ನೋಟು ವಿನಿಮಯ ಮಾಡಲು ನಿರ್ಧರಿಸಲಾಗಿದೆ. ಸೋಮವಾರದಿಂದ ಯಾವುದೇ ವ್ಯಕ್ತಿ ಎಂದಿನಂತೆ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಭಾನುವಾರ ಬ್ಯಾಂಕ್‍ಗಳಿಗೆ ರಜೆ: 500, 1000 ರು. ನೋಟು ನಿಷೇಧದ ಬಳಿಕ ಸತತ 11 ದಿನ ಕಾರ್ಯನಿರ್ವಹಿಸಿದ್ದ ಬ್ಯಾಂಕ್‍ಗಳು ನ.20ರ ಭಾನುವಾರ ಮುಚ್ಚಿರಲಿವೆ.

Leave a Reply

comments

Related Articles

error: