ಪ್ರಮುಖ ಸುದ್ದಿಮೈಸೂರು

ಸಚಿವರ ಆದೇಶ ಹುಂಡಿ ಬೀಗ ತೆರವು

ಮುಜರಾಯಿ ಇಲಾಖೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಶ್ರೀಲಕ್ಷ್ಮೀಕಾಂತ ದೇವಸ್ಥಾನದ ಕಾಣಿಕೆ ಹುಂಡಿಗೆ ಜಡಿದಿದ್ದ ಬೀಗಮುದ್ರೆಯನ್ನು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತೆರವುಗೊಳಿಸಿದರು.

ಉಪವಿಭಾಗಾಧಿಕಾರಿ ಆನಂದ್ ನೇತೃತ್ವದಲ್ಲಿ ಅಧಿಕಾರಿಗಳು ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎಂದು ತಿಳಿಸಿ ಕಾಣಿಕೆ ಹುಂಡಿಗೆ ಬೀಗಮುದ್ರೆ ಹಾಕಿದ್ದರು. ಇದಕ್ಕೆ ದೇವಸ್ಥಾನ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈಚೆಗೆ ಈ ಬಗ್ಗೆ ಸಭೆ ನಡೆಸಿದ ಭಕ್ತರು ಅಧಿಕಾರಿಗಳ ಕ್ರಮಕ್ಕೆ ಆಕ್ರೋಶವ್ಯಕ್ತಪಡಿಸಿ ಅವರ ವಿರುದ್ಧ ಹೋರಾಟ ನಡೆಸಲು ತೀರ್ಮಾನಕೈಗೊಂಡರು. ಸಭೆಯಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀಸೋಮನಾಥನಂದ ಸ್ವಾಮಿ ಸಲಹೆ ಮೇರೆಗೆ ಶಾಸಕ ಜಿ.ಟಿ.ದೇವೇಗೌಡ ಹಾಗೂ ಇತರರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಗಮನ ಸೆಳೆದಿದ್ದು ಮನವಿಗೆ ಸ್ಪಂದಿಸಿದ ಸಚಿವರು ಹುಂಡಿಯ ಬೀಗ ತೆರವುಗೊಳಿಸಿ ದೇವಸ್ಥಾನವನ್ನು ಸಮಿತಿಗೆ ನೀಡುವಂತೆ ನಿರ್ದೇಶನವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು ಬೀಗಮುದ್ರೆ ತೆರವುಗೊಳಿಸಿ ಬೀಗವನ್ನು ಸಮಿತಿಗೆ ಒಪ್ಪಿಸಿದ್ದಾರೆ.

 

Leave a Reply

comments

Related Articles

error: