ಕರ್ನಾಟಕಮೈಸೂರು

ಸ್ಪಾದಲ್ಲಿ ವೇಶ್ಯಾವಾಟಿಕೆ ಪ್ರಕರಣ : ಹಾಸ್ಯ ನಟ ಸಾಧುಕೋಕಿಲಾಗೆ ನಿರೀಕ್ಷಣಾ ಜಾಮೀನು

ಮೈಸೂರು,ಜ.9:- ಸ್ಪಾದಲ್ಲಿ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದನವನದ ಹಾಸ್ಯನಟರಿಬ್ಬರ ಹೆಸರು ಥಳುಕು ಹಾಕಿಕೊಂಡಿತ್ತು. ಇದೀಗ ಹಾಸ್ಯ ನಟ ಸಾಧುಕೋಕಿಲಾಗೆ ನಿರೀಕ್ಷಣಾ ಜಾಮೀನು ದೊರಕಿದೆ.

ಮೈಸೂರಿನ 7 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆ ಆಧರಿಸಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಸೆಕ್ಷನ್ 438 ಅಡಿ ಪೊಲೀಸರು ಪೂರ್ವ ಬಂಧನ ಮಾಡದಂತೆ ನ್ಯಾಯಾಲಯ ಜಾಮೀನು ನೀಡಿದೆ. ಜನವರಿ ಎರಡರಂದು ನಿರೀಕ್ಷಣಾ ಜಾಮೀನಿಗಾಗಿ ಸಾಧುಕೋಕಿಲ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅಗತ್ಯಬಿದ್ದರೆ ವೈದ್ಯಕೀಯ ಅಥವಾ ಡಿ.ಎನ್.ಎ ಪರೀಕ್ಷೆಗೆ ಒಳಗಾಗಬೇಕು. ಸಾಕ್ಷಿ ನಾಶ ಮಾಡಬಾರದು. ನೊಂದ ಯುವತಿಗೆ ಒತ್ತಡ ಹೇರಬಾರದು.15 ದಿನಗಳ ಒಳಗೆ ತನಿಕಾಧಿಕಾರಿಗಳ ಮುಂದೆ ಹಾಜರಾಗಿ ಸಹಕರಿಸಬೇಕು ಎಂಬ ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ನಟ ಮಂಡ್ಯ ರಮೇಶ್ ಹೆಸರು ಕೂಡ ಕೇಳಿ ಬಂದಿದ್ದು,ಆರೋಪಿ ಸ್ಪಾ ಮಾಲೀಕ ರಾಜೇಶ್ ಬಂಧನದಲ್ಲಿದ್ದು, ಜಾಮೀನು ಇನ್ನೂ ಮಂಜೂರಾಗಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: