ಮೈಸೂರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜ.9-ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಇತರೆ ನಾಗರಿಕರಂತೆ ಬದುಕಲು ಬುದ್ಧಿಮಾಂದ್ಯ ಹಾಗೂ ಸಿ.ಪಿ.ಮಕ್ಕಳ ಪೋಷಕರಿಗೆ ಕನಿಷ್ಠ ಮಾಸಿಕ 5000 ರೂ.ಗಳ ಪೋಷಣಾ ಭತ್ಯೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಕಲಚೇತನರ ಅಭ್ಯುದಯ ವೇದಿಕೆಯವರು ಪ್ರತಿಭಟನೆ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಉಲ್ಲೇಖಿತ ಮಕ್ಕಳಿಗೆ ಅಗತ್ಯವಿರುವ ಫಿಜಿಯೋ ಥೆರಪಿ, ಸ್ಪೀಟ್ ಥೆರಪಿ ಹಾಗೂ ಇತರೆ ತರಬೇತಿಗಳು ಒಂದೇ ಸ್ಥಳದಲ್ಲಿ ದೊರಕಲು ಶೇ.3ರ ವಿಶೇಷ ಚೇತನರ ಅನುದಾನವನ್ನು ಬಳಸಿ ಒಂದು ತರಬೇತಿ ಕೇಂದ್ರವನ್ನು ಹಾಗೂ ಸುಸಜ್ಜಿತ ಡೇಕೇರ್ ಸೆಂಟರ್ ಅನ್ನು ಸ್ಥಾಪಿಸಿ ಈ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ವಿಶೇಷ ಚೇತನರಿಗೆ ಅವಶ್ಯವಿರುವ ಔಷಧೋಪಕರಣಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ಉಚಿತವಾಗಿ ವಿತರಿಸಲು ಕ್ರಮ ವಹಿಸಬೇಕು. ಆಯುಷ್ ಇಲಾಖೆಯಲ್ಲಿ ವೈದ್ಯಕೀಯ ತಪಾಸಣೆ ಹಾಗೂ ತರಬೇತಿಗೆಂದು ಬರುವ ಪೋಷಕರಿಗೆ ಉಳಿದುಕೊಳ್ಳಲು ವಸತಿಗಳನ್ನು ನಿರ್ಮಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಜನಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರಸನ್ನ, ಮಂಜುಳ ಉಮೇಶ್ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: