ಪ್ರಮುಖ ಸುದ್ದಿಮೈಸೂರು

ಹುಲಿ ಗಣತಿ ವೇಳೆ ಹಾಜರಾದ ಹುಲಿ : ಕ್ಯಾಮರಾದಲ್ಲಿ ಸೆರೆಯಾಗಿವೆ ನವಿಲು, ಜಿಂಕೆ, ಸಾರಂಗ

ಮೈಸೂರು,ಜ.9:- ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿ ಗಣತಿ ಕಾರ್ಯಾಚರಣೆ ಆರಂಭಗೊಂಡಿದೆ.

ಹುಲಿಗಳ ಗಣತಿ ಕಾರ್ಯ ಆರಂಭಗೊಂಡ ಮೊದಲ ದಿನವೇ ಬಂಡೀಪುರ ಸಫಾರಿ ಜೋನ್ ನಲ್ಲಿ ಒಂದು ಹಾಗೂ ನಾಗರಹೊಳೆಯ ಡಿ.ಬಿ.ಕುಪ್ಪೆ ರೇಂಜ್ ನಲ್ಲಿ ಮೂರು ಹುಲಿಗಳು  ಗೋಚರಿಸಿವೆ ಎನ್ನಲಾಗಿದ್ದು, ಹುಲಿಗಳ ಹೆಜ್ಜೆಯೂ  ಕಾಣಸಿಕ್ಕಿದೆ.  ಕ್ಯಾಮೆರಾಗಳು ಹಾಗೂ ಹುಲಿಗಳ ಹೆಜ್ಜೆ ಗುರುತುಗಳನ್ನು ಆಧರಿಸಿ ಗಣತಿ ಕಾರ್ಯ ನಡೆಯುತ್ತಿದೆ. ಹುಲಿಗಳ ಗಣತಿಯೇ ಪ್ರಧಾನವಾಗಿದ್ದರೂ ಅದರ ಜೊತೆಗೆ ನವಿಲು, ಜಿಂಕೆ ಸಾರಂಗಗಳು,ಕಾಡೆಮ್ಮೆ ಇನ್ನಿತರ ಪ್ರಾಣಿಗಳ ಗಣತಿಯೂ ನಡೆಯುತ್ತಿದ್ದು, ನವಿಲು, ಜಿಂಕೆ ಸಾರಂಗಗಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ವಿಶೇಷವಾಗಿದೆ. ಇದು ಗಣತಿ ಕಾರ್ಯದಲ್ಲಿ ಭಾಗವಹಿಸಿರುವವರಲ್ಲಿ ಹುಮ್ಮಸ್ಸು, ಉತ್ಸಾಹ ಇಮ್ಮಡಿಸಿದೆ. ಬೆಳಿಗ್ಗೆ 6ಗಂಟೆಗೆ ಆರಂಭವಾಗುವ ಗಣತಿ ಕಾರ್ಯ 10ಗಂಟೆಯವರೆಗೂ ನಡೆಯುತ್ತದೆ. ಕೆಲವು ಸ್ವಯಂ ಸೇವಕರು 10ಗಂಟೆಯ ನಂತರವೂ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡಿನಲ್ಲಿ ಹುಲಿಗಳ ಗಣತಿ ಕಾರ್ಯ ನಡೆಯುತ್ತಿದೆ. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಎಂಟು ವಿದ್ಯಾರ್ಥಿನಿಯರೂ ಇದ್ದಾರೆ. ಮೊಬೈಲ್ ಬಳಕೆ ನಿಷೇಧವಾಗಿದೆ. ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಉತ್ಸಾಹದಿಂದಲೇ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: