ಮೈಸೂರು

ಕುವೆಂಪುನಗರದಲ್ಲಿ ಸರಣಿ ಅಪಘಾತ : ಕಾರು ಚಾಲಕ ಪರಾರಿ

ಮೈಸೂರು,ಜ.9:- ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ಕುವೆಂಪುನಗರದಲ್ಲಿ ಸರಣಿ ಅಪಘಾತ ನಡೆದಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಮಂಗಳವಾರ ಬೆಳಿಗ್ಗೆ  ಕಾರಿನ ಚಾಲಕನೋರ್ವ ತನ್ನ ಕಾರನ್ನು  ಆರ್ ಎಂಪಿ ಕ್ವಾಟ್ರಸ್ ಬಳಿ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದಿದ್ದು, ಎರಡು ಬೈಕ್ , ಎಂಐಟಿ ಕಾಲೇಜ್ ಬಸ್ , ಹೋಂಡಾ ಆಕ್ಟಿವಾಕ್ಕೆ  ಡಿಕ್ಕಿ ಹೊಡೆದು ಬಳಿಕ  ಮರವೊಂದಕ್ಕೆ ಗುದ್ದಿ ನಿಂತಿದೆ. ಭಯದಿಂದ  ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಿಂದ ವಾಹನಗಳು ಜಖಂಗೊಂಡಿವೆ. ಕುವೆಂಪು ನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: