ಮೈಸೂರು

ಭೋವಿ ಸಮಾಜದ ಭಾಗ್ಯವತಿಗೆ ಮೇಯರ್ ಸ್ಥಾನ ನೀಡಲು ಒತ್ತಾಯ

ಮೈಸೂರು, ಜ.9 : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಭೋವಿ ಸಮಾಜದ ಬಿ. ಭಾಗ್ಯವತಿಯವರಿಗೆ ನೀಡಬೇಕೆಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಒತ್ತಾಯಿಸಿತು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಮಿತಿ ಅಧ್ಯಕ್ಷ ಜಿ.ನಾಗರಾಜು ಮಾತನಾಡಿ, ಮಹಾನಗರದ 23ನೇ ವಾರ್ಡಿನ ಪ್ರತಿನಿಧಿಯಾಗಿರುವ ಭಾಗ್ಯವತಿಯವರು ಅತ್ಯಂತ ಹಿಂದುಳಿದ ವರ್ಗದ ಭೋವಿ ಸಮಾಜಕ್ಕೆ ಸೇರಿದ್ದವರಾಗಿದ್ದು ಅವರಿಗೆ ಮೇಯರ್ ಸ್ಥಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದ ಅವರು. ಸ್ವಾತಂತ್ರ್ಯ ಪಡೆದಾಗಿಂದಲೂ ಮೀಸಲಾತಿ ದೊರೆತಿದ್ದರು ಸಮಾಜದವರಿಗೆ ಮೇಯರ್ ಸ್ಥಾನ ಲಭಿಸಿಲ್ಲ, ಆದ್ದರಿಂದ ಈ ಬಾರಿ ಒದಗಿಸುವ ಮೂಲಕ ರಾಜಕೀಯವಾಗಿ ಸಮಾಜಕ್ಕೆ ಪ್ರತಿನಿಧ್ಯ ನೀಡಬೇಕೆಂದು ಅವರು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಪಿ.ಮಲ್ಲಯ್ಯ, ಸಂಘಟನಾ ಕಾರ್ಯದರ್ಶಿ ಎಂ.ಸ್ವಾಮಿ, ನಿರ್ದೇಶಕರಾದ ಮಹದೇವು ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್ ಪಿ)

 

Leave a Reply

comments

Related Articles

error: