ಕ್ರೀಡೆಪ್ರಮುಖ ಸುದ್ದಿ

ಬಿಸಿಸಿಐ ನಿಂದ ಅಮಾನತುಗೊಂಡ ಯೂಸುಫ್ ಪಠಾಣ್

ಮುಂಬೈ,ಜ.9-ಆಲ್ ರೌಂಡರ್ ಯೂಸುಫ್ ಪಠಾಣ್ ಅವರನ್ನು ಉದ್ದೀಪನ ಮದ್ದು ಸೇವಿಸಿರುವ ಕಾರಣಕ್ಕಾಗಿ ಬಿಸಿಸಿಐ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಅಮಾನತು ಮಾಡಿದೆ.

ಅಜಾಗರೂಕತೆಯಿಂದ ನಿಷೇಧಿತ ಉದ್ದೀಪನ ಮದ್ದನ್ನು ಸೇವಿರುವುದು ದೃಢಪಟ್ಟಿರುವುದರಿಂದ ಪಠಾಣ್ ಅವರನ್ನು ತಕ್ಷಣದಿಂದ 5 ತಿಂಗಳ ಕಾಲ ನಿಷೇಧಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.

2017ರ ಅಕ್ಟೋಬರ್ ತಿಂಗಳಿನಲ್ಲಿ ದೇಸಿ ಪಂದ್ಯವೊಂದನ್ನು ಆಡುತ್ತಿರುವ ವೇಳೆ ಉದ್ದೀಪನ ಪರೀಕ್ಷೆ ನಡೆಸಲಾಗಿದ್ದು, ಆ ಪರೀಕ್ಷೆಯಲ್ಲಿ ಪಠಾಣ್ ಮದ್ದು ಸೇವಿಸಿರುವು ದು ಧೃಡಪಟ್ಟಿದೆ ಎಂದು ಬಿಸಿಸಿಐ ಹೇಳಿದೆ. ಕೆಮ್ಮಿನ ಸಿರಪ್ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಮದ್ದನ್ನು ಪಠಾಣ್ ಸೇವಿಸಿದ್ದರು ಎನ್ನಲಾಗಿದೆ.

ಸದ್ಯ ಭಾರತ ಕ್ರಿಕೆಟ್ ತಂಡದಿಂದ ದೂರವಿರುವ ಬರೋಡದ ಆಟಗಾರನಿಗೆ ಈ ಬಾರಿಯ ಐಪಿಎಲ್ ನಲ್ಲಿ ಆಡುವ ಕನಸು ಭಗ್ನಗೊಂಡಿದೆ. (ವರದಿ-ಎಂ.ಎನ್)

 

 

 

 

Leave a Reply

comments

Related Articles

error: