ಕರ್ನಾಟಕಪ್ರಮುಖ ಸುದ್ದಿಮೈಸೂರು

‘ಮೈಕ್ರೋ ಎಟಿಎಂ’ಗಳ ಆರಂಭ: ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿಗೆ ಎಟಿಎಂ!

ದೇಶಾದ್ಯಂತ 500 ಮತ್ತು 1000 ರುಪಾಯಿಗಳ ನೋಟು ರದ್ದಾದ ನಂತರ ಸಾರ್ವಜನಿಕರು ಹಳೆ ನೋಟುಗಳ ಬದಲಾವಣೆ ಮತ್ತು ಹೊಸ ನೋಟುಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಒತ್ತಡವನ್ನು ಕಡಿಮೆಗೊಳಿಸಲು ಕಾರ್ಪೋರೇಷನ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ರೂಪಿಸಿ ಜಾರಿಗೆ ತಂದಿದೆ.

ಹಣ ಪಡೆಯಲು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿರುವ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಕಾರ್ಪೂರೇಷನ್ ಬ್ಯಾಂಕ್. ತನ್ನ ಎಟಿಎಂ, ಶಾಖೆಗಳಲ್ಲಿನ ಸೇವೆಗಳ ಜತೆ ಜತೆಗೆ ’ಮೈಕ್ರೋ ಎಟಿಎಂ’ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದೆ.

ಆಧಾರ್ ಕಾರ್ಡ್‌ನ ಸಹಕಾರದೊಂದಿಗೆ ಶಾಖೆಗಳಲ್ಲಿ ನೇರವಾಗಿ ತೆರಳಿ ಸಾರ್ವಜನಿಕರು 2000 ರು.ಗಳನ್ನು ಪಡೆಯಲು ‘ಮೈಕ್ರೋ ಎಟಿಎಂ’ಗಳ ಮೂಲಕ ವ್ಯವಸ್ಥೆ ಮಾಡಿದೆ.

ನಗರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಶಾಖೆಗಳಿದ್ದು ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕರು ಹಣ ಪಡೆಯಲು ಎದುರಿಸುತ್ತಿರುವ ಸಂಕಷ್ಟಗಳನ್ನು ದೂರಾಗಿಸಲು ಮುಂದಡಿ ಇರಿಸಿರುವ ಕಾರ್ಪೋರೇಷನ್ ಬ್ಯಾಂಕ್ ‘ಬ್ಯಾಂಕ್ ಮಿತ್ರ’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮನೆ ಬಾಗಿಲಿಗೆ ನಗದನ್ನು ತಲುಪಿಸುವ ಮಹತ್ವದ ಕಾರ್ಯ ಆರಂಭಿಸಿದ್ದು, ನಗರ ಪ್ರದೇಶದಲ್ಲೂ ಇದು ಮುಂದುವರಿಯಲಿದೆ.

ಕಾರ್ಪೋರೇಷನ್ ಬ್ಯಾಂಕ್‌ನ ಈ ತ್ವರಿತ ಯೋಜನೆ ಜಾರಿ ಮತ್ತು ವಿಶೀಷ್ಟ ಸೇವೆಯನ್ನು ಶ್ಲಾಘಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಎನ್. ಗೋಪಾಲ್, ಈ ಯೋಜನೆ ಜಾರಿಯಿಂದ ಹಣ ಪಡೆಯುವುದು ಸುಲಭವಾಗಲಿದೆ ಮತ್ತು ಎಟಿಎಂ, ಬ್ಯಾಂಕ್‌ಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂದಿದ್ದಾರೆ.

ನಗರದ ನೃಪತುಂಗ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಸೇವೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಶಾಖೆಗಳಿಗೆ ವಿಸ್ತರಿಸಲು ಸಿದ್ಧತೆ ನಡೆಸಲಾಗಿದೆ.

‘ಮೈಕ್ರೋ ಎಟಿಎಂ’ಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಬ್ಯಾಂಕಿನ ವೃತ್ತ ಜನರಲ್ ಮ್ಯಾನೇಜರ್ ಪಿ. ಪರಮಶಿವಂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎನ್. ಗೋಪಾಲ್, ಡಿಜಿಎಂ ರಾಬರ್ಟ್ ಮೆನೆಜಿಸ್, ಉಪ ವಿಭಾಗೀಯ ಪ್ರಮುಖ ಹರ ಮೋಹನ್ ಸಾಹು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: