ಮೈಸೂರು

ಅಂದರ್ ಬಾಹರ್ ಇಸ್ಟೀಟ್ ಜೂಜಾಡುತ್ತಿದ್ದ 6 ಜನರ ಬಂಧನ

ಮೈಸೂರು,ಜ.10:- ಮೈಸೂರು ನಗರ ಸಿ.ಸಿ.ಬಿ. ಮತ್ತು ಆಲನಹಳ್ಳಿ ಪೊಲೀಸರು ಮಾಹಿತಿ ಮೇರೆಗೆ  ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು-ಬನ್ನೂರು ರಸ್ತೆಯಲ್ಲಿರುವ ನವಕೀಸ್ ಶಾಲೆಯ ಹಿಂಭಾಗದಲ್ಲಿರುವ ಖಾಲಿ ಜಾಗಕ್ಕೆ ದಾಳಿ ಮಾಡಿ  ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಜರ್‍ಬಾದ್ ನಿವಾಸಿಗಳಾದ ಸತ್ಯಪ್ರಕಾಶ್ ಬಿನ್ ಮಹದೇವ, (27), ಹರೀಶ್ ಬಿನ್ ಲೇಟ್ ಸಿದ್ದಪ್ಪ, (25), ಮಂಜು ಬಿನ್ ಸೀನಪ್ಪ, (29), ಮಂಜುನಾಥ್ ಬಿನ್ ಶಶಿ (27),ವಿದ್ಯಾನಗರ ಶಿವಪ್ರಕಾಶ್ ಬಿನ್ ಪುಟ್ಟಸ್ವಾಮಿ, (29), ಮಂಡ್ಯ ಜಿಲ್ಲೆಯ ಕೆಂಪಯ್ಯನಹುಂಡಿಯ ಪಾಪ ಬಿನ್ ರಾಮಣ್ಣ, (35),  ಎಂಬವರುಗಳನ್ನು ಬಂಧಿಸಿ ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ 26,615 ರೂ. ಹಾಗೂ 3 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಆಮ್ಟೆಅವರ ಮಾರ್ಗದರ್ಶನದಲ್ಲಿ ಜ.7ರಂದು ಸಿ.ಸಿ.ಬಿ.ಯ ಎ.ಸಿ.ಪಿ. ಲಿಂಗಪ್ಪರವರ ನೇತೃತ್ವದಲ್ಲಿ ನಡೆದಿದ್ದು,  ಸಿ.ಸಿ.ಬಿ.ಯ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಸಿ.ಸಿ.ಬಿ.ಯ ಎ.ಎಸ್.ಐ. ರಾಜು, ಸಿಬ್ಬಂದಿಗಳಾದ  ಅಸ್ಗರ್‍ಖಾನ್,  ಡಿ.ಶ್ರೀನಿವಾಸಪ್ರಸಾದ್,  ಪುರುಷೋತ್ತಮ್,  ಅರುಣ್‍ಕುಮಾರ್,  ಪುನೀತ್.ಹೆಚ್.ಎಸ್.,  ನಾಗರಾಜು,  ಲಿಂಗರಾಜು. ಶೈಲೇಶ್, ಧನಂಜಯ ಹಾಗೂ ಶಿವಕುಮಾರ್‍ ಪಾಲ್ಗೊಂಡಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: