
ಕರ್ನಾಟಕ
ಒತ್ತುವರಿ ಮಾಡಿಕೊಂಡಿದ್ದ ಕೆರೆಕಟ್ಟೆ ತೆರವಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
ರಾಜ್ಯ(ಚಾಮರಾಜನಗರ)ಜ.10:- ಕೊಳ್ಳೇಗಾಲ ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿ ತಾಲೂಕಿನ ಕುಂತೂರು ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನು ಹಾಗೂ ಕೆರೆಕಟ್ಟೆಗಳನ್ನು ತೆರವು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಆರಂಭಿಸಿದ್ದ ಅನಿರ್ಧಿಷ್ಟಾವದಿ ಧರಣಿ ಎರಡನೆಯ ದಿನವೂ ಮುಂದವರೆದಿದೆ.
ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನಾಕಾರರು ಸೋಮವಾರ ಇಡೀ ರಾತ್ರಿ ಕಳೆದು ಮಂಗಳವಾರದಂದು ಕೂಡ ರೈತ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದು ಮುಂದುವರೆದಿದೆ. ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ಮಾತನಾಡಿ, ಈಗಾಗಲೇ ಉಪವಿಭಾಗಾಧಿಕಾರಿ ಭೇಟಿ ನೀಡಿ ಒತ್ತುವರಿ ಜಮೀನಿನ ಸರಿಯಾದ ದಾಖಲಾತಿ ನೀಡುವಂತೆ ತಿಳಿಸಿದ್ದಾರೆ. ಆದರೂ ಸಹ ಜಮೀನು ಮತ್ತು ಕೆರೆಕಟ್ಟೆಗಳು ತೆರವು ಮಾಡುವವರೆಗೂ ಕೂಡ ಧರಣಿಯನ್ನು ಮುಂದುವರೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ನಾಡಗೌಡ ನಾಗರಾಜು, ಪ್ರಭುಸ್ವಾಮಿ, ಮಹದೇವಪ್ಪ, ವಿಷಕಂಠೇಗೌಡ, ಚಿನ್ನಸ್ವಾಮಿ, ಕುಂತೂರು ಮೋಳೆ ಪುಟ್ಟಸ್ವಾಮಿ, ಕರಿನಂಜಶೆಟ್ಟಿ ರಾಮಕೃಷ್ಣ, ತೇರಂಬಳ್ಳಿ ಕುಮಾರ, ನಾಗೇಂದ್ರ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)