ಮೈಸೂರು

ಟೈರ್ ಮಾರಾಟ ಮಾಡಿ ಕಾರ್ಮಿಕರಿಗೆ ವೇತನ: ಜಿಲ್ಲಾಧಿಕಾರಿ ಭರವಸೆ

2 ವರ್ಷಗಳಿಂದ ವೇತನವಿಲ್ಲದೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಫಾಲ್ಕನ್ ಟೈರ್ಸ್ ಕಾರ್ಖಾನೆಯಲ್ಲಿರುವ ಟೈರ್‍ಗಳನ್ನು ಮಾರಾಟ ಮಾಡಿ ಕಾರ್ಮಿಕರಿಗೆ ಬಾಕಿ ವೇತನ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದರು.

ಕಾರ್ಖಾನೆ ಉಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಫಾಲ್ಕನ್ ಟೈರ್ಸ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರ ಮುಂಭಾಗ ಕಾರ್ಮಿಕರು ಕುಟುಂಬ ಸಮೇತ ಉಪವಾಸ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾರ್ಮಿಕ ಮುಖಂಡರೊಡನೆ ಸಭೆ ನಡೆಸಿದರು. ಟೈರ್‍ಗಳನ್ನು ಮಾರಾಟ ಮಾಡಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ವೇತನ ನೀಡುವಂತೆ ಸರಕಾರ ಈಗಾಗಲೇ ಸೂಚಿಸಿದೆ. ಶೀಘ್ರವೇ ಟೈರ್ ಮಾರಾಟಕ್ಕೆ ಕ್ರಮ ವಹಿಸಲಾಗುವುದು. ಕಾರ್ಖಾನೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

 

Leave a Reply

comments

Related Articles

error: