ಮೈಸೂರು

ಐಎಸ್ ಐ ನಕಲಿ  ಹೆಲ್ಮೆಟ್ ವಶ ಪಡೆದ ಪೊಲೀಸರು

ಮೈಸೂರು,ಜ.10:- ನಗರದ ಕೆ.ಆರ್.ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಮಾರಾಟ ಮಾಡುತ್ತಿದ್ದ   ಐಎಸ್ ಐ ಮಾರ್ಕಿನ  ನಕಲಿ ಹೆಲ್ಮೆಟ್ ನ್ನು ವಶಕ್ಕೆ ಪಡೆದರು.

ಹೆಲ್ಮೆಟ್ ನಕಲಿಯಾಗಿರೋ ಬಗ್ಗೆ ಕೆ.ಆರ್.ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಪರಿಶೀಲನೆ ನಡೆಸಿದರು. ಹೆಲ್ಮೆಟ್ ಗಳಿಗೆ ನಕಲಿ ಐಎಸ್ ಐ ಸ್ಟಿಕರ್ ಹಾಕಿ ಗ್ರಾಹಕರಿಗೆ ಮಾರಾಟಗಾರರು ಟೋಪಿ ಹಾಕುತ್ತಿದ್ದರು.  ನಕಲಿ ಹೆಲ್ಮೆಟ್ ಹಾವಳಿ ತಡೆಯಲು ಪೊಲೀಸರು ಮುಂದಾಗಿದ್ದು, 30. ಕ್ಕೂ ಹೆಚ್ಚು ನಕಲಿ ಹೆಲ್ಮೆಟ್ ವಶಕ್ಕೆಪಡೆದಿದ್ದಾರೆ. ಕಡ್ಡಾಯವಾಗಿ ಐಎಸ್ ಐ ಹೆಲ್ಮೆಟ್ ಬಳಸಬೇಕು ಅನ್ನೋ ಹೈ ಕೋರ್ಟ್ ಆದೇಶ ಹಿನ್ನಲೆ.ಜ.31 ರ ವರೆಗೂ ಗುಣಮಟ್ಟದ ಐಎಸ್ ಐ ಹೆಲ್ಮೆಟ್ ಖರೀದಿಗೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಣೇಶ್ವರ್ ರಾವ್ ಗಡುವು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: