ಮೈಸೂರು

ಬೀಡಿ ಕೇಳಿದ್ದಕ್ಕೆ ಜಗಳ: ಬಿಡಿಸಲು ಬಂದ ವ್ಯಕ್ತಿಯ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ

ಮೈಸೂರು,ಜ.11:- ಬೀಡಿ ಕೇಳಿದನೆಂಬ ಕಾರಣಕ್ಕೆ ಹಲ್ಲೆಗೆ ಮುಂದಾದ ವ್ಯಕ್ತಿಯೋರ್ವ ಹಲ್ಲೆಯನ್ನು ತಡೆಯಲು ಬಂದ ವ್ಯಕ್ತಿಯನ್ನೇ ಕೊಲೆಗೈದ ಘಟನೆ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ನಡೆದಿತ್ತು. ಕೊಲೆಗೈದ ಆರೋಪಿಗೆ ಮೈಸೂರು ಜಿಲ್ಲಾ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಆರೋಪಿ ಮಹದೇವಪ್ರಸಾದ್ ಹಾಗೂ ಮುರಳಿ ಎಂಬವರಿಗೆ ಬೀಡಿ ವಿಚಾರಕ್ಕಾಗಿ 2012ರ ಮೇನಲ್ಲಿ ಜಗಳ ನಡೆದಿತ್ತು. ಈ ಕುರಿತು ದ್ವೇಷ ಸಾಧಿಸಿದ ಮಹದೇವಪ್ರಸಾದ್ ಮುರಳಿ ಕೆಲಸ ಬಿಟ್ಟು ಬರುತ್ತಿರುವುದನ್ನೇ ಕಾದು ಕುಳಿತು ಮುರಳಿ ಮೇಲೆ ಹಲ್ಲೆಗೆ ಮುಂದಾಗಿದ್ದ.  ಈ ವೇಳೆ ಮುರಳಿಯನ್ನು ರಕ್ಷಿಸಲು ಬಂದ ಸಂತೋಷ್ ಕುಮಾರ್ ಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದ. ಇದರಿಂದ ಸಂತೋಷ್ ಮೃತಪಟ್ಟಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಹದೇವಪ್ರಸಾದ್ ಗೆ ಜೀವಾವಧಿ ಶಿಕ್ಷೆ ಮತ್ತು 12ಸಾವಿರ ರೂ.ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ವಾಸಂತಿ ಎಂ ಅಂಗಡಿ ವಾದಿಸಿದ್ದರು. (ಕೆ.ಎಸ್,ಎಸ್,.ಎಚ್)

Leave a Reply

comments

Related Articles

error: