ಮೈಸೂರು

ಜ.28-31 : ಮೊದಲ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮ : ಡಿ.ರಂದೀಪ್

ಮೈಸೂರು,ಜ.11:- ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಮೊದಲ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಜ.28ರಿಂದ ನಾಲ್ಕುದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷದೊಳಗಿನ ಒಟ್ಟು 2,63,480 ಮಕ್ಕಳಿಗೆ ಪೊಲಿಯೋ ಹನಿ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆರೋಗ್ಯಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 836 ಪ್ರದೇಶಗಳನ್ನು ಒಳಗೊಂಡಂತೆ ಗ್ರಾಮಾಂತರ ಪ್ರದೇಶದಲ್ಲಿ 1186 ಲಸಿಕಾ ಕೇಂದ್ರಗಳಿಂದ 1,51,850 ಮಕ್ಕಳಿಗೆ ಹಾಗೂ ಮೈಸೂರು ನಗರದಲ್ಲಿ 402 ಲಸಿಕಾ ಕೇಂದ್ರಗಳಿಂದ 1,11,630 ಮಕ್ಕಳಿಗೆ ಪೊಲಿಯೋ ಹನಿ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 1,588 ಕೇಂದ್ರಗಳನ್ನು ಗುರುತಿಸಲಾಗಿದ್ದು, ಮೇಲ್ವಿಚಾರಕರೊಂದಿಗೆ ಒಟ್ಟು 2,63,480 ಮಕ್ಕಳಿಗೆ ಪೊಲಿಯೋ ಹನಿ ನೀಡಲು ಸಿದ್ಧತೆ ನಡೆದಿದೆ ಎಂದರು. ಮೊದಲ ಹಂತದಲ್ಲಿ ಜ.29,30 ಮತ್ತು 31ರಂದು ಮನೆಗಳಿಗೆ ಭೇಟಿ ನೀಡಿ ಪೊಲಿಯೋ ಹನಿ ಹಾಕಿಸಲಾಗುತ್ತಿದ್ದು, ಎರಡನೇ ಹಂತದ ಪೊಲಿಯೋ ಹನಿ ಕಾರ್ಯಕ್ರಮ ಮಾರ್ಚ್ 11ರಿಂದ ನಡೆಯಲಿದೆ. ಪೋಷಕರು ಯಾವುದೇ ಆತಂಕಕ್ಕೆ ಒಳಗಾಗದೇ, ವದಂತಿಗಳಿಗೆ ಕಿವಿಗೊಡದೇ ತಮ್ಮ ಐದು ವರ್ಷದೊಳಿಗಿನ ಮಕ್ಕಳಿಗೆ ಹತ್ತಿರದ ಕೇಂದ್ರಕ್ಕೆ ಕರೆದೊಯ್ದು ಪೊಲಿಯೋ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. (ಎಸ್,ಎಚ್)

Leave a Reply

comments

Related Articles

error: