ದೇಶಪ್ರಮುಖ ಸುದ್ದಿ

ಮುಂಬೈ ಅಗ್ನಿ ದುರಂತ: ಪಬ್ ಮಾಲೀಕರ ಬಂಧನ

ಮುಂಬೈ,ಜ.11-ಮುಂಬೈನ ರೆಸ್ಟೋರೆಂಟ್ ವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೆಸ್ಟೋರೆಂಟ್ ಮಾಲೀಕರನ್ನು ಮುಂಬೈಪೊಲೀಸರು ಬಂಧಿಸಿದ್ದಾರೆ.

ಕಳೆದ ಡಿ.28ರ ತಡರಾತ್ರಿ ಕಮಲಾ ಮಿಲ್ಸ್ ಕಾಂಪೌಂಡ್ ನ ರೆಸ್ಟೋರೆಂಟ್ ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ದುರಂತ ಸಂಭವಿಸಿದ ಬೆನ್ನಲ್ಲೇ ಒನ್ ಅಬೋವ್ ಪಬ್ ಮತ್ತು ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕರು ನಾಪತ್ತೆಯಾಗಿದ್ದರು. ಮುಂಬೈ ಪೊಲೀಸರು ಕಾರ್ಯಾಚರಣೆ ನಡೆಸಿ ಮೋಜೋಸ್ ಬಿಸ್ಚ್ರೋ ಪಬ್ ಮಾಲೀಕನನ್ನು ಬಂಧಿಸಿದ್ದರಾದರೂ, ಒನ್ ಅಬೋವ್ ಪಬ್ ನ ಮಾಲೀಕರಾದ ಸಂಘವಿ ಸಹೋದರರು ಮಾತ್ರ ನಾಪತ್ತೆಯಾಗಿದ್ದರು.

ನಾಪತ್ತೆಯಾಗಿದ್ದ ಮಾಲೀಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಪಬ್ ಮಾಲೀಕರ ಅವರ ಭಾವಚಿತ್ರಗಳಿರುವ ಪೋಸ್ಟರ್ ಗಳನ್ನು ಕಮಲಾಮಿಲ್ಸ್ ಕಾಪೌಂಡ್ ನಲ್ಲಿ ಅಂಟಿಸಿದ್ದರು. ಅಲ್ಲದೆ, ಇವರ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಕೂಡ ಘೋಷಿಸಿದ್ದರು. ಇದೀಗ ಕಾರ್ಯಾಚರಣೆ ನಡೆಸಿ ಈ ಇಬ್ಬರು ಮಾಲೀಕರನ್ನು ಪೊಲೀಸರು ಅಂಧೇರಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ನಿನ್ನೆಯಷ್ಟೇ ಪೊಲೀಸರ ಎಚ್ಚರಿಕೆ ಹೊರತಾಗಿಯೂ ಸಂಘವಿ ಸಹೋದರರಿಗೆ ರಕ್ಷಣೆ ನೀಡಿದ್ದ ಮತ್ತೋರ್ವ ಹೋಟೆಲ್ ಉದ್ಯಮಿ ವಿಶಾಲ್ ಕರಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು ಪ್ರಕರಣದ ಮತ್ತೋರ್ವ ಆರೋಪಿ ಪಬ್ ಸಹ ಮಾಲೀಕ ಮಂಕರ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಈ ಅಗ್ನಿ ದುರಂತದಲ್ಲಿ 15 ಮಂದಿ ಮೃತಪಟ್ಟಿದ್ದರು. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪೇದೆಯೊಬ್ಬರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಎಂಟು ಮಂದಿಯ ಪ್ರಾಣ ರಕ್ಷಿಸಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: